Header Ads Widget

ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಗೆ ಗುಂಡು ಪೂಜಾರಿ ಪಾರಂಪಲ್ಲಿ ಆಯ್ಕೆ


ಕನ್ನಡ ಜಾನಪದ ಪರಿಷತ್ ಬೆಂಗಳೂರು ಇವರು ಕೊಡಮಾಡುವ 2024 ನೆಯ ಸಾಲಿನ , ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಶ್ರೀ ಗುರು ಮಾರುತಿ ಹೌಂದರಾಯನ ವಾಲ್ಗದ ಜಾನಪದ ನೃತ್ಯ ತಂಡ (ರಿ) ಇದರ ಹಿರಿಯ ಜಾನಪದ ಕಲಾವಿದರಾದ ಶ್ರೀ ಗುಂಡು ಪೂಜಾರಿ ಪಾರಂಪಳ್ಳಿ ಸಾಲಿಗ್ರಾಮ ಉಡುಪಿ ಜಿಲ್ಲೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್  ರಾಜ್ಯಾಧ್ಯಕ್ಷರು ಹಾಗೂ ಭಾರತ ಸರಕಾರದ ಐ.ಸಿ.ಸಿ. ಆರ್ ಸದಸ್ಯರು ಆದ ಡಾ.ಎಸ್ ಬಾಲಾಜಿಯವರು ತಿಳಿಸಿದ್ದಾರೆ.


 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ:06/10/2024 ರಂದು ಸೈಂಟ್ ಕ್ಲಾರೆಟ್ ಕಾಲೇಜು ಸ್ವಾಯತ್ತ ಜಾಲಹಳ್ಳಿ ಬೆಂಗಳೂರು ಇಲ್ಲಿ ನಡೆಯಲಿರುವುದು ಎಂದು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ