Header Ads Widget

ಇಮೇಜ್ ಮೊಬೈಲ್ಸ್ ಉಡುಪಿ : ಅರ್ಥಪೂರ್ಣವಾಗಿ 7ನೇ ವರ್ಷದ ವಾರ್ಷಿಕೋತ್ಸವ ಆಚರಣೆ

                                          

ಉಡುಪಿಯ ಹೆಸರಾಂತ ಮೊಬೈಲ್ ರೀಟೇಲರ್ಸ್, ಇಮೇಜ್ ಮೊಬೈಲ್ಸ್ ಉಡುಪಿಯ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣ ರೀತಿಯಲ್ಲಿ, ವಿಭಿನ್ನವಾಗಿ ಉಡುಪಿಯ ಶಾಖೆಯಲ್ಲಿ ಆಚರಿಸಲಾಯಿತು.

ಸಂಸ್ಥೆಯು 8ನೇ ವರ್ಷಕ್ಕೆ ಪಾದಾರ್ಪಣೆಗೈಯುವ ಈ ಶುಭಸಮಾರಂಭದಲ್ಲಿ, 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಹಾಗು ದೇಶಕ್ಕೆ ಕೀರ್ತಿ ತಂದಿರುವ ಕಟಪಾಡಿಯ ಶ್ರೀ ಬಸವರಾಜ್ ಅವರಿಗೆ ನಾಗರೀಕ ಸನ್ಮಾನ ನೀಡುವ ಮೂಲಕ ಅರ್ಥಪೂರ್ಣವಾದ ರೀತಿಯಲ್ಲಿ ಇಮೇಜ್ ಮೊಬೈಲ್ಸ್ ಉಡುಪಿಯ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಸಮಾರಂಭದ ಅಥಿತಿಗಳಾಗಿ ಪ್ರಶಾಂತ್ ಆರ್ ಎಸ್, ಯೋಗೀಶ್ ಕುಮಾರ್, ಕಿಶೋರ್ ಕುಮಾರ್ ಕಟಪಾಡಿ, ಪ್ರಶಾಂತ್ ಅಚ್ಚಡ, ಜನಾರ್ದನ್ ಕೊಡವೂರು, ಪೂರ್ಣಿಮಾ ಜನಾರ್ದನ್, ಯಶೋಧ ಕೇಶವ್, ಅನ್ವರ್ ಸಾಹೇಬ್, ಶಿವಪ್ರಸಾದ್, ನಿತೀಶ್ ಪೂಜಾರಿ, ಸುಶಾಂತ್ ಕೆರೆಮಠ ಭಾಗವಹಿಸಿದ್ದರು. ಮಾಲೀಕರಾದ ರಾಕೇಶ್, ಯಾದವ್, ಧನಂಜಯ್ ಹಾಗೂ ಸಂಸ್ಥೆಯ ಹಲವಾರು ಪ್ರೋತ್ಸಾಹಕರು ಉಪಸ್ಥಿತರಿದ್ದರು.