ಮಣಿಪಾಲದ ಕಲಾಸ್ಪಂದನ ಕಲಾ ಶಾಲೆಗೀಗ 30 ವರ್ಷ. ಪ್ರಾಚೀನ ವಾದ್ಯ ವೀಣೆ ಯನ್ನು ಪ್ರಚಲಿತ ಗಳಿಸುವಲ್ಲಿ ಹಲವಾರು ಕಾರ್ಯಕ್ರಮ ಹಾಕಿಕೊಂಡು .ಹೊಸ ಪ್ರಯೋಗ ನಡೆಸಿ ಜನರನ್ನು ವೀಣೆಯ ಬಗ್ಗೆ ಆಸಕ್ತಿ ಮೂಡಿಸುತ್ತಿದೆ.
ನವರಾತ್ರಿಯಲ್ಲಿ ಹೆರ್ಗ ದುರ್ಗಾಪರಮೇಶ್ವರಿ ಯ ಸನ್ನಿಧಾನದಲ್ಲಿ ಮೊತ್ತ ಮೊದಲ ಬಾರಿಗೆ ಯಕ್ಷ ವೀಣಾ ಪ್ರಯೋಗ ನಡೆಯಿತು.
ಕರಾವಳಿಯ ಮಣ್ಣಿನ ಕಲೆ ಯಕ್ಷಗಾನ. ಹಾಗೂ ಸಾಂಪ್ರದಾಯಿಕ ವಾದ್ಯ ವೀಣಾ ಇವೆರಡನ್ನೂ ಒಂದೇ ವೇದಿಕೆಯಲ್ಲಿ ಪ್ರಯೋಗ ಮಾಡಿದ್ದು . ಯಕ್ಷ ವೇಷ. ಭಾಗವತಿಕೆ. ಚೆಂಡೆ ಮದ್ದಳೆ ಯ ಜೊತೆಗೆ ವೀಣೆ ಹಾಗೂ ಮೃದಂಗ ಸುಲಲಿತ ವಾಗಿ ಸೇರಿಕೊಂಡಿತು.
ಶ್ರೀ ದೇವಿ ಮಹಾತ್ಮೆಯ ಕೊನೆಯ ಭಾಗ ಶುಂಭಾಸುರ ವಧೆಯ ಕಥಾ ಭಾಗ ವನ್ನು ಆಯಿದು ವೀಣಾ ವಾದನ ದೊಂದಿಗೆ ಪ್ರಸ್ತುತ ಪಡಿಸ ಲಾಯಿತು.
ಮಹಿಷಾಸುರ ವಧೆಯ ಕಥಾ ಪೀಠಿಕೆ ಯ ನ್ನು ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಿ. ಮೊದಲೊಂದಿಪ ಗಣಪತಿಯ ಸ್ತುತಿಯನ್ನು ನಾಟ ರಾಗದ ಮಹಗಣ ಪತಿಂ ಕೃತಿ ಯನ್ನು ಮೊದಲು ವೀಣೆಯಲ್ಲಿ ಹಾಗೂ ವಾರಣ ವರಣ ಭಾಗವತಿಕೆಯಲ್ಲಿ ಹಾಡಲಾಯಿತು
ನಂತರ ಮೂರು ಲೋಕ ವನ್ನು ವಶಪಡಿಸಿಕೊಂಡ ಶುಂಭಾ ಸುರ ನ ಉಪಟಳವನ್ನು ತಾಳಲಾರದ ದೇವೇಂದ್ರನು ಜಗನ್ಮಾತೆಗೆ ಮೊರೆ ಹೊಕ್ಕುವ ಯಕ್ಷಗಾನದ ಪದ್ಯ ಭಾಗವತಿಕೆ ಯಲ್ಲಿ ಜನನಿ ಕೇಳ್ ಬಿನ್ನಹ ಈ ಹಾಡಿಗೆ ದೇವಿ ವೇದಿಕೆಗೆ ಪ್ರವೇಶಿಸಿ.. ಮುಂದಿನ ಕಥಾಭಾಗ ಯಕ್ಷಗಾನದ ಭಾಗವತಿಕೆ ಹಾಗೂ ವೀಣೆ ಚೆಂಡೆ ಮದ್ದಳೆ ಮೃದಂಗಗಳ ಹಿಮ್ಮೇಳ ದೊಂದಿಗೆ ಶ್ರೀ ದೇವಿಯ ಮಾತಿನೊಂದಿಗೆ ಪ್ರಸ್ತುತ ಪಡಿಸಲಾಯಿತು.
ಆಯಿದ ರಾಗಗಳಾದ ಶಿವ ರಂಜಿನಿ . ನಾಟ. ಆರಭಿ. ಮೋಹನ ಹಿಂದೋಳ. ಬೃಂದಾವನ ಸಾರಂಗಿ.ಶುದ್ಧ ಧನ್ಯಾಸಿ. ಮಧ್ಯಮಾವತಿ ರಾಗ ಗಳು ವೀಣೆ ಹಾಗೂ ಭಾಗವತಿಕೆಯಲ್ಲಿ ಮೆರುಗು ಹೆಚ್ಚಿಸಿದವು.
ಶುಂಭನ ವಧೆಗೆ ಶ್ರೀದೇವಿ ಸುಂದರ ತರುಣಿಯಾಗಿ ರೂಪ ಧಾರಣೆ ಮಾಡಿದ್ದು ಹಾಗೂ ದುಷ್ಟರ ಸಂಹಾರಕ್ಕೆ ಅವರನ್ನು ತನ್ನೆಡೆಗೆ ಆಕರ್ಷಿಸಲು ಕದಂಬವನದಲ್ಲಿ ವೀಣಾ ಧಾರಿಣಿಯಾಗಿ ಕುಳಿತು ದೇವಿ ಕೌಶಿಕೆ ಸ್ವತಹ ವೀಣೆಯನ್ನು ನುಡಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಯಿತು.
ವಿಶೇಷವಾಗಿ ಸಮಾಜದಲ್ಲಿ ಪ್ರಚಲಿತವಾಗಿರುವ ಕೃತಿಗಳ ಆಯ್ಕೆ ಹಾಗೂ ಕಥಾ ನಿರೂಪಣೆ ಜನರ ಮನಮುಟ್ಟುವಲ್ಲಿ ಯಶಸ್ವಿಯಾಯಿತು.
ವೀಣೆಯ ನಾದದ ತರಂಗ ಗಳು ಯಕ್ಷಗಾನದ ಹಾಡಿನ ಶೈಲಿಗೆ ಅನುಕೂಲಕರವಾಗಿ ಸಮ್ಮಿಳಿತ ಗೊಂಡು. ಹೊಸ ಪ್ರಯೋಗ ಯಶಸ್ವಿಯಾಯಿತು.
ಈ ಪ್ರಯೋಗ ವಿದುಷಿ ಪವನ ಬಿ ಆಚಾರ್ ರವರ ಅಪೇಕ್ಷೆ .
ರಂಗ ರೂಪದ ಪರಿಕಲ್ಪನೆ - ಡಾ. ಹರೀಶ್ ಜೋಶಿ ವಿಟ್ಲ.
ಶ್ರೀದೇವಿಯಾಗಿ - ಶಿಲ್ಪಾ ಜೋಶಿ. ಹಾಗೂ
ವೀಣೆಯಲ್ಲಿ ವಿದುಷಿ ಪವನ ಬಿ ಆಚಾರ್. ಶಶಿಕಲಾ ಭಟ್. ಸುಮಂಗಲಾ ಹೆಬ್ಬಾರ್ . ಮೃದಂಗ - ಡಾ. ಬಾಲಚಂದ್ರ ಆಚಾರ್
ಭಾಗವತಿಕೆ - ಉಮೇಶ ಸುವರ್ಣ ಗೋಪಾಡಿ . ಚೆಂಡೆ - ಬಸವ ಮರಕಾಲ ಹಾಗೂ ಮದ್ದಳೆಯಲ್ಲಿ - ಕೃಷ್ಣ ಮೂರ್ತಿ ಭಟ್
ಸಹಕಾರ - ವಿಪಂಚಿ ಬಳಗ . ಮಣಿಪಾಲ. - ಹರಿಪ್ರಿಯ