ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಸುಮಾರು 90 ವರ್ಷಗಳ ಹಿಂದಿನ ಮುದ್ರಿತ ದಾಖಲೆಗಳ ಅದ್ಭುತ ಸಂಗ್ರಹ ಹಾಗೂ ಗಾಂಧಿ ಸ್ಪರ್ಶಿಸಿದ ಚರಕ ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದಲ್ಲಿ ಸುರಕ್ಷಿತವಾಗಿದೆ. ಗಾಂಧೀಜಿ ಉಡುಪಿ ಕುಂದಾಪುರ ವಡೇರಹೋಬಳಿಗೆ ಬಂದಾಗ ಶ್ರೀ ವೆಂಕಟರಮಣ ಕಾರಂತರ ದೊಡ್ಡ ಮನೆಯಲ್ಲಿ ತಂಗುತಿದ್ದರು. ಕಾರಂತರು ಸಂಚಯಗೊಳಿಸಿದ ಅಪೂರ್ವ ಗಾಂಧಿ ಆಲ್ಬಂ ಅನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಅನಾವರಣಗೊಳಿಸಿದರು. ಗಾಂಧೀ ಜಯಂತಿ ದಿನ ಗಣ್ಯರೆಲ್ಲರೂ ಗೌರವ ನಮನ ಸಲ್ಲಿಸಿದರು.