ದಿನಾಂಕ 7/10/2024 ರಂದು ನಗರಸಭೆ ಪೌರಾಯುಕ್ತಾರಾದ ಶ್ರೀಯುತ ರಾಯಪ್ಪ ಇವರನ್ನು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು 60% ಕನ್ನಡ ನಾಮಫಲಕ ಕಡ್ಡಾಯದ ಬಗ್ಗೆ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಸೇರಿ ಮನವಿ ನೀಡಿದರು.
ಮುಂದಿನ ದಿನಗಳಲ್ಲಿ ಈ ಮನವಿಗೆ ಯಾವುದೇ ಒಂದು ಕ್ರಮ ಸ್ಪಂದಿಸದೆ ಇದ್ದಲ್ಲಿ ಅತೀ ಶೀಘ್ರದಲ್ಲಿ ನಗರ ಸಭೆಗೆ ಮುತ್ತಿಗೆ ಹಾಗೂ ಬಹು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು ನಗರಸಭೆಯ ಪೌರಾಯುಕ್ತರಾದ ರಾಯಪ್ಪ ಅವರಿಗೆ ಖಡಕ್ಕಾಗಿ ಉತ್ತರವನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಜ್ಯೋತಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಅಲ್ಫನ್ಸ್, ಗೋಪಾಲ್ ದೊರೆ, ಜಿಲ್ಲಾ ಕಾರ್ಯದರ್ಶಿಯಾದ ಯೋಗೇಶ್ ಕೋಟ್ಯನ್ ಹಾಗೂ ಜಿಲ್ಲಾ ಸದಸ್ಯರಾದ ಕೋಟ್ಯಾನ್, ಜಾಫರ್, ಸಿದ್ದು, ಅಂಬರೀಶ್ ಮೌನೇಶ್, ವಿಶ್ವನಾಥ್, ಜೆ ಟ್ಟಿಂಗರಾಯ, ಮಡಿಯಪ್ಪ, ಬಸವರಾಜ್, ಬಸವರಾಜ್ ಉಪಸ್ಥಿತರಿದ್ದರು.