Header Ads Widget

ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ


ಅಖಿಲ ಭಾರತ ಶರಣ ಸಾಹಿತ್ಯ ಪ್ರತಿಷ್ಠಾನ ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2024ನೇ ಸಾಲಿನ 'ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ'ಗೆ ಉಡುಪಿಯ ಸಾಹಿತಿ ಡಾ. ಕಾತ್ಯಾ ಯಿನಿ ಕುಂಜಿಬೆಟ್ಟು ಅವರ  'ಅಕ್ಕ ಕೇಳವ್ವ' ಆಧುನಿಕ ವಚನಗಳ ಕೃತಿ ಪಾತ್ರ ವಾಗಿದೆ. 

ಪ್ರಶಸ್ತಿಯು 20,000 ನಗದು ಒಳಗೊಂಡಿದೆ. ನವೆಂಬರ್ 18ರಂದು ಬೆಂಗಳೂರಿನ ರಮಣಶ್ರೀ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ನಿರಂಜನ ಚೋಳಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿ ರುತ್ತಾರೆ.