ಯುವ ಸಮುದಾಯ ಆರೋಗ್ಯದ ಬಗ್ಗೆ ಅತಿ ಅವಶ್ಯಕವಾಗಿ ಕಾಳಜಿ ವಹಿಸಬೇಕು ಎಂದು ಉಡುಪಿ ಜಿಲ್ಲಾಸ್ಪತ್ರೆಯ ಆಯುಷ್ ಇದರ ವೈದ್ಯಾಧಿಕಾರಿ ಡಾ. ಸ್ವಾತಿ ಶೇಟ್ ಹೇಳಿದರು.
ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಇದರ ಸಹಯೋಗದೊಂದಿಗೆ ಕೋಟದ ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿನ ಸಂ ಯೋಜನೆಯೊoದಿಗೆ ಅರಿವು ನಿಮ್ಮಗಿರಲಿ ನೆರವು 10ನೇ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತ ನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಆಹಾರ ಪದ್ಧತಿಗಳು ದಿಕ್ಕು ತಪ್ಪುತ್ತಿದೆ. ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಕಾಣುವಂತಾಗಿದೆ. ನಾನಾ ರೋಗಗಳಿಗೆ ತುತ್ತಾಗುವ ದಿನಗಳು ಬಂದೊದಗಿದೆ.
ಹೀಗಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರಲ್ಲದೆ, ಜಂಕ್ ಪುಡ್ ಸೇರಿದಂತೆ ವಿಷಕಾರಕ ಪದಾರ್ಥಗಳಿಂದ ದೂರವಿರಲು ಸಲಹೆ ನೀಡಿ ಆರೋಗ್ಯವಂತ ಜೀವನ ಪದ್ಧತಿಗಳ ಬಗ್ಗೆ ಸವಿವರವಾಗಿ ಹೇಳಿದರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇ ಶನ್ ಮಣೂರು ಇದರ ನಿರ್ದೇಶಕಿ ದಿವ್ಯ ಲಕ್ಷ್ಮೀ ಪ್ರಶಾಂತ್ ಕುಂದರ್ ಉದ್ಘಾಟಿಸಿದರು.
ಅವರು ಮಾತನಾಡಿ, ಶೈಕ್ಷಣಿಕ ಬದುಕನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ. ಸಾಧನೆ ಯ ಮಜಲುಗಳಿಗೆ ವೇದಿಕೆ ಕಲ್ಪಿಸಿಕೊಂಡು ಉತ್ತಮ ನಾಗರಿಕರಾಗಿ ಬದುಕುವಂತೆ ಸಲಹೆ ನೀಡಿದರು.
ಕೋಟ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಸಮಯ ದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯಶಶ್ರೀ ಶೆಟ್ಟಿ, ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ, ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೋ. ಡಾ. ಸುನಿತಾ ವಿ, ಪಂಚವರ್ಣ ಯುವಕ ಮಂಡ ಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ವಿಪ್ರ ಮಹಿಳಾ ಸಾಲಿಗ್ರಾಮ ವಲಯಾಧ್ಯಕ್ಷೆ ವನಿತಾ ಉಪಾ ಧ್ಯಾಯ ಉಪಸ್ಥಿತರಿದ್ದರು.
ಪಡುಕರೆ ಪದವಿ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ ಸ್ವಾಗತಿಸಿದರು.
ಪಂಚವರ್ಣ ಮಹಿಳಾ ಮಂಡಲದ ಸಂಚಾ ಲಕಿ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯದರ್ಶಿ ವಸಂತಿ ವಂದಿಸಿದರು.