Header Ads Widget

ಉಡುಪಿ ಶ್ರೀ ಕೃಷ್ಣಮಠ : ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ

 

ಪರ್ಯಾಯ ಶ್ರೀ ಪುತ್ತಿಗೆಮಠ ಶ್ರೀಕೃಷ್ಣ ಮಠ, ಉಡುಪಿ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣಮಠದ ಮುಖ್ಯ ದ್ವಾರದಬಳಿ ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಸುಗುಣೇಂದ್ರ ತೀರ್ಥ ಶ್ರೀಪಾದರು ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು. ನಗರಸಭಾಧ್ಯಕ್ಷ ಶ್ರೀ ಪ್ರಭಾಕರ ಪೂಜಾರಿ , ನಗರ ಸಭಾ ಸದಸ್ಯೆ ಮಾನಸ ಪೈ,ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಶ್ರೀ ರಮಣ ಆಚಾರ್ಯ,ಹಾಗೂ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಶ್ರೀ ರಾಘವೇಂದ್ರ ಭಟ್, ಪ್ರಭಾರಿಗಳವರಾದ ಶ್ರೀ ವೆಂಕಟೇಶ್ ಮೆಹಂದಲೆ,ಶ್ರೀ ಜಗದೀಶ ಕುಮಾರ್, ಶ್ರೀಮತಿ ಲೀಲಾ ಆರ್ ಅಮೀನ್ ,ಹರಿಪ್ರಸಾದ ಕೆ, ನಾಗರಾಜ್ ಶೇಟ್,ಡಿ.ಟಿ.ಅಮೀನ್, ಗಿರೀಶ್, ಶ್ರೀಪತಿ ಭಟ್,ಲಕ್ಷ್ಮೀ ಸುವರ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.