ಶ್ರೀ ವೇದವ್ಯಾಸ ಪ್ರತಿಷ್ಠಾಪನೆಯ ದಿನದಂದು ಶ್ರೀ ವ್ಯಾಸಮುಷ್ಟಿಯ ಆರಾಧಕರಾದ ಶ್ರೀ ಸುಬ್ರಹ್ಮಣ್ಯ ಶ್ರೀಪಾದರು ಉಡುಪಿ ಶ್ರೀ ಕೃಷ್ಣಮುಖ್ಯ ಪ್ರಾಣ ದೇವರ ದರ್ಶನಕ್ಕೆ ಆಗಮಿಸಿರುವುದು ನಮಗೆ ಸಂತಸ ತಂದಿದೆ ಎಂದು ಪರ್ಯಾಯಶ್ರೀ ಪುತ್ತಿಗೆಹಿರಿಯ ಶ್ರೀಪಾದರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟರು.
ಉಡುಪಿ ಪರಿಸರದಲ್ಲಿ ಸುಬ್ರಹ್ಮಣ್ಯ ಮಠ ನಿರ್ಮಾಣ ಮಾಡುತ್ತಿರುವ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು ನರಸಿಂಹದೇವರ ವ್ಯಾಸಮುಷ್ಟಿಯ ಪೂಜೆಯನ್ನು ಶ್ರೀ ಕೃಷ್ಣ ಮಠದಲ್ಲಿ ನಡೆಸಬೇಕು ಎಂದು ಶ್ರೀಗಳು ಆಹ್ವಾನಿಸಿದರು. ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಅನೇಕ ಮಂದಿ ಭಕ್ತರು ಮತ್ತು ವಿದ್ವಾಂಸರ ಉಪಸ್ಥಿತಿಯಲ್ಲಿ ಪೂಜ್ಯ ಶ್ರೀಪಾದರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.