Header Ads Widget

2028ರ ವರೆಗೆ ಈ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಸಿಎಂ: ಕುಮಾರಸ್ವಾಮಿ

2028ರ ವರೆಗೆ ಈ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಸಿಎಂ ಆಗ್ತೀನಿ. ಜನರು ಒಂದು ಅವಕಾಶ ಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಆಗಿರುವ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದಲ್ಲಿ ʻಮಂಡ್ಯ ಟು ಇಂಡಿಯಾʼ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡಿದ ಅವರು, 2028ರ ವರೆಗೆ ಈ ಸರ್ಕಾರ ನಡೆಯಲ್ಲ. ಅಷ್ಟರೊಳಗೆ ನನಗೆ ಅವಕಾಶ ಬರುತ್ತೆ, ಮತ್ತೆ ನಾನೇ ಸಿಎಂ ಆಗ್ತೀನಿ ಎಂದು ಹೇಳಿದರು.

ನಾನು ಜ್ಯೋತಿಷಿ ಅಲ್ಲ ಆದ್ರೂ ಹೇಳ್ತಿದ್ದಿನಿ. ಮತ್ತೆ ಸಿಎಂ ಆಗುವ ವಿಚಾರ ಜನ ತೀರ್ಮಾನ ಮಾಡ್ತಾರೆ ಅನ್ನೋ ವಿಶ್ವಾಸದಲ್ಲಿದ್ದೇನೆ. ಜನ ಬಯಸಿದರೆ ಯಾಕೆ ಆಗಬಾರದು? 5 ವರ್ಷ ಸರ್ಕಾರ ನಡೆಸಲು ನನಗೆ ಅವಕಾಶ ಮಾಡಿಕೊಡಿ ಅಂತ ಜನರಿಗೆ ಈಗಲೂ ಮನವಿ ಮಾಡ್ತೀನಿ. ಹಿಂದಿನ ಅವಧಿಯಲ್ಲಿ ನನ್ನ 14 ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ಮಾಡಿದ್ದು. ಈಗಿನ ಸಂಪೂರ್ಣ ಬಹುಮತದ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲೂ ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. 5 ವರ್ಷಗಳ ಸರ್ಕಾರ ನನಗೆ ಒಂದು ಬಾರಿ ಸಿಕ್ಕಿದ್ರೆ, ನನಗೆ ಆಗಿರುವ ಅನುಭವದಲ್ಲಿ ಉತ್ತಮ ಕೆಲಸ ಮಾಡ್ತೇನೆ ಎಂದು ಭರವಸೆ ನೀಡಿದರು.