ನಾಗಬನದ ಪ್ರಧಾನ ಅರ್ಚಕರಾದ ನಂದನ್ ಭಟ್ ಸಂಘವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಸುವುದು ಪೋಷಕರಾದ ನಮ್ಮ ಕರ್ತವ್ಯ ಎಂದರು.
ವಿಭುದಪ್ರಿಯ ನಾಗಬನದಲ್ಲಿ ಇಂತಹ ಅದೆಷ್ಟೋ ಕಾರ್ಯಕ್ರಮಗಳು ಜರುಗುತ್ತಿದ್ದು, ಈ ದಿನ ಮಕ್ಕಳಿಗಾಗಿ ವಿಶೇಷ ಭಜನಾ ಸಂಘ ಉದ್ಘಾಟನೆಗೊಂಡಿರುವುದು ನಮಗೆಲ್ಲ ಸಂತಸದ ವಿಷಯ ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ಭಜನಾ ಮಂದಿರ ಗಳಲ್ಲಿ ಮಕ್ಕಳಿಗಾಗಿ ಒಂದು ವಿಶೇಷ ತಂಡವನ್ನು ರಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಡುಪಿ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷರಾದ ರತ್ನಾಕರ ಇಂದ್ರಾಳಿ, ನಾರಾಯಣ ಉಪಾಧ್ಯಾಯ, ಊರಿನ ಹಿರಿಯರು,ಮಕ್ಕಳು ನಾಗಬನದ ಸಮನ್ವಯ ಕಾರರಾದ ಬಾಬು ಮಣಿಪಾಲ ಉಪಸ್ಥಿತ ರಿದ್ದರು.
*🍁 ಮಾಹಿತಿ: ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ*