ಉಡುಪಿ: ಪುತ್ತೂರು ಬ್ರಾಹ್ಮಣ ಮಹಾ ಸಭಾದ ತಿಂಗಳ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಎನ್. ಲಕ್ಷ್ಮಿ ನಾರಾಯಣ ಭಟ್ ಹಾಗೂ ಮೂಡು ಗಿಳಿಯಾರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ಶಿವರಾಮ ಭಟ್ ಎಂ. ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟರು.
ಭಾಷಣದಲ್ಲಿ ಮುಖ್ಯ ಅತಿಥಿಗಳು ಆಧುನಿಕ ಶಿಕ್ಷಣದಲ್ಲಿ ಮೊಬೈಲ್ ಬಳಕೆ ಅನಿವಾರ್ಯ ವಾಗಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಹಾಗೂ ಆಚಾರ ವಿಚಾರಗಳನ್ನು ಕಲಿಸಿ ಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.
ಹಾಗೆಯೇ ಮಕ್ಕಳನ್ನು ಮನೆಯಲ್ಲಿಯೇ ಕುಳ್ಳಿರಿಸದೆ ಅವರಿಗೆ ಹೊರಗಿನ ಪ್ರಪಂಚ ವನ್ನು ಪರಿಚಯಿಸುವ ಜವಾಬ್ದಾರಿಯೂ ಪೋಷಕರ ಮೇಲಿದೆ ಎಂದರು.
ಇಬ್ಬರು ಅತಿಥಿಗಳನ್ನು ಅಭಿನಂದನಾ ಪತ್ರದೊಂದಿಗೆ ಶಾಲು ಹೊದಿಸಿ ಸನ್ಮಾನಿಸ ಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ವಲಯದ 25ಕ್ಕೂ ಹೆಚ್ಚು ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷೆ ಶುಭಾ ಬಾಳ್ತಿಲ್ಲಾಯ, ಕಾರ್ಯದರ್ಶಿ ಮಂಜುಳಾ ವಿ.ಪ್ರಸಾದ್, ಹಿರಿಯ ಸದಸ್ಯರಾದ ಆನಂದ ಭಟ್ ಮಾಯಗುಂಡಿ, ಹಯವದನ ಭಟ್, ನಿಕಟ ಪೂರ್ವ ಅಧ್ಯಕ್ಷ ದುರ್ಗಾ ಪ್ರಸಾದ್ ಭಾರ್ಗವ್ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಸುಬ್ರ ಹ್ಮಣ್ಯ ಜೋಶಿ ಅವರು ನಿರೂಪಿಸಿದರು.