Header Ads Widget

ರೇಡಿಯೋ‌ ಮಣಿಪಾಲದಲ್ಲಿ ಶರನ್ನವರಾತ್ರಿ ವಿಶೇಷ ಕಾರ್ಯಕ್ರಮಗಳ ಪ್ರಸಾರ


ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಶರನ್ನವರಾತ್ರಿ ಆಚರಣೆಯ ಅಂಗವಾಗಿ ವಿಶೇಷ ಉನ್ಯಾಸ ಕಾರ್ಯಕ್ರಮ ಪ್ರಸಾರವಾಗಲಿದೆ.

ಮಣಿಪಾಲ ಪರ್ಕಳದ ಚಿಂತಕರಾಗಿರುವ ನಟರಾಜ್ ಪರ್ಕಳ ಅವರು ಪ್ರತಿ ದಿನ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದು ಅಕ್ಟೋಬರ್ 3 ಗುರುವಾರದಿಂದ ಅಕ್ಟೋಬರ್ 11 ಶುಕ್ರವಾರದ ತನಕ ಪ್ರತಿ ದಿನ ಸಂಜೆ 4.15ಕ್ಕೆ ಪ್ರಸಾರವಾಗಲಿದೆ.‌ ಮರುದಿನ ಮದ್ಯಾಹ್ನ 12.15ಕ್ಕೆ ಮರು ಪ್ರಸಾರವಾಗಲಿದೆ.  

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.