Header Ads Widget

ರಾಗ ತರoಗ(ರಿ)- ಪ್ರತಿಭಾ ಪುರಸ್ಕಾರ-2024


ರಾಗ ತರಂಗ(ರಿ) ಮಂಗಳೂರು ಸಂಸ್ಥೆಯ "ಪ್ರತಿಭಾ ಪುರಸ್ಕಾರ-2024" ತಾ.29/09/ 2024ನೇ ರವಿವಾರ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಸಭಾಂಗಣದಲ್ಲಿ ಶ್ರೀ ಕೆ ಎನ್ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಮಂಗಳೂರು ಇದರ ಪ್ರಾoಶುಪಾಲರಾದ ಡಾ. ಮಾಲಿನಿ ಹೆಬ್ಬಾರ್ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ ಇದರ ವೈದ್ಯಕೀಯ ಶಿಕ್ಷಣ ಪದವಿಯಲ್ಲಿ ಪ್ರಥಮ ರಾಂಕ್ ವಿಜೇತರಾದ ಡಾ. ಮಧುರಾ ಕೆ ಐ ಅವರುಮುಖ್ಯಅಭ್ಯಾಗತರಾಗಿದ್ದ ಕಾರ್ಯಕ್ರಮ ದಲ್ಲಿ ರಾಗ ತರಂಗ(ರಿ) ದ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. 

SSLC, PUC, ಪದವಿ, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗಗಳಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ದಾಖಲಿಸಿದ ಸದಸ್ಯರನ್ನು ಮತ್ತು ಸದಸ್ಯರ 17 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು

ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಜನ್ಮ ದಿನವನ್ನು ಹೊಂದಿರುವ ಸಂಸ್ಥೆಯ ಸದಸ್ಯರ ಜನ್ಮದಿನ ವನ್ನು ಸಮಾರoಭದ ವೇದಿಕೆಯಲ್ಲಿ ದೀಪ ಪ್ರಜ್ವಲನೆಯ ಮೂಲಕ ವಿಶಿಷ್ಟವಾಗಿ ಆಚರಿಸ ಲಾಯಿತು. 

ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಮಾಸ್ಟರ್ ಶ್ರೀವತ್ಸ ತಂತ್ರಿ ನಡೆಸಿಕೊಟ್ಟ ವಯೋಲಿನ್ ಕಚೇರಿ ಸಭಾಸದರ ಮೆಚ್ಚುಗೆಗೆ ಪಾತ್ರವಾ ಯಿತು. ಉತ್ತರಾರ್ಧದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಸ್ವೀಕರಿ ಸಿದ ವಿದ್ಯಾರ್ಥಿಗಳಿಂದ ಮತ್ತು ರಾಗತರoಗದ ಸದಸ್ಯರಿಂದ ಪ್ರಸ್ತುತಗೊಂಡ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಕಾರ್ಯಕ್ರಮ ಎಲ್ಲರ ಪ್ರಸಂಶೆಗೆ ಪಾತ್ರವಾಯಿತು.


ಮಂಗಳೂರು ಮತ್ತು ಉಡುಪಿಯ ಪ್ರಶಸ್ತಿ ವಿಜೇತ ವಿದ್ಯಾರ್ಥಿನಿಯರಿಂದ ಹುಲಿ ಕುಣಿತ ಸೇರಿದ್ದ ಎಲ್ಲ ಸದಸ್ಯರ ಮೆಚ್ಚುಗೆಗೆ ಪಾತ್ರ ವಾಯಿತು. ರಾಗ ತರoಗದ ಅಧ್ಯಕ್ಷರಾದ ಶ್ರೀ ಕೆ ಎನ್ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅಭ್ಯಾ ಗತ ಮಹನೀಯರ ಜತೆಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ ಸಿ ರಾವ್, ಉಪಾಧ್ಯಕ್ಷ ರಾದ ಶ್ರೀ ಚಂದ್ರ ಶೇಖರ್ ದೈತೋಟ ಮತ್ತು ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಸಹಕಾರ್ಯದರ್ಶಿ ಶ್ರೀ ಜಯ ಪ್ರಕಾಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವ ಹಣೆ ಗೈದರು. 

ಮಾಸ್ಟರ್ ಶ್ರೀವತ್ಸ ತಂತ್ರಿ ಮತ್ತು ಮಾಸ್ಟರ್ ಶಾಶ್ವತ ತಂತ್ರಿ ವೇದ ಪಠಣದ ಮೂಲಕ ದೇವತಾ ಸ್ತುತಿಗೈದರು. ಸಹ ಭೋಜನ ದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.