ಶ್ರೀ ಶೀರೂರು ಮಠ ಉಡುಪಿ, ಪರಿವರ್ತನಾ ಫೌಂಡೇಶನ್ ರಿ. ಉಡುಪಿ ಹಾಗೂ ರಾಮತಾರಕ ಮಹಾಮಂಡಲ ಪೂಜಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀ ಕ್ಷೇತ್ರ ಶೀರೂರು ಮೂಲಮಠ ಶೀರೂರು ಹಿರಿಯಡಕದಳಿ ಡಿ. 14 ಮತ್ತು 15ರಂದು ಹಿಂದೂ ಭಗಿನಿಯರ ರಕ್ಷಣೆ, ಅಖಂಡ ಹಿಂದೂ ರಾಷ್ಟ್ರದ ಸಂಕಲ್ಪ ಹಾಗೂ ರಾಮರಾಜ್ಯದ ಪರಿಕಲ್ಪನೆಯೊಂದಿಗೆ ನಡೆಯಲಿರುವ ಶ್ರೀರಾಮ ತಾರಕ ಮಹಾ ಮಂಡಲ ಪೂಜೆ, ಶ್ರೀರಾಮ ತಾರಕ ಯಾಗ, ಮನ್ಯುಸೂಕ್ತ ಯಾಗ, ವಾಯುಸ್ತುತಿ ಯಾಗ, ದತ್ತಾತ್ರೇಯ ಯಾಗ ಕಾರ್ಯಕ್ರಮದ ವಿಜ್ನ್ಯಾಪನಾ ಪತ್ರಿಕೆಯನ್ನು ಪರಮಪೂಜ್ಯ ಕ್ರಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರವರು, ಪರಮಪೂಜ್ಯ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸಮಿತಿಯ ಅಧ್ಯಕ್ಷ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಯಾಧ್ಯಕ್ಷ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಂಚಾಲಕ ಶ್ರೀಕಾಂತ ನಾಯಕ್, ಪ್ರಧಾನ ಕಾರ್ಯದರ್ಶಿ ಮೋಹನ್ ಭಟ್, ಸಂಘಟನಾ ಕಾರ್ಯದರ್ಶಿ ಜಿತೇಶ್, ಕೋಶಾಧಿಕಾರಿ ಶ್ರೀನಿವಾಸ್ ರಾವ್ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ, ಸಾಂಸ್ಕೃತಿಕ ಕಾರ್ಯದರ್ಶಿ ಅರುಣ್ ಕುಂದರ್, ಪ್ರಮುಖರಾದ ಡಾ. ವಿಜಯೇಂದ್ರ, ಶಿವಪ್ರಸಾದ್ ತಲ್ಲೂರು, ಜಗದೀಶ್ ಅಮೀನ್ ಮೂಡಬೆಟ್ಟು, ಅಶೋಕ್ ಕುಮಾರ್ ಅಲೆವೂರು ಮತ್ತಿತರು ಉಪಸ್ಥಿತರಿದ್ದರು