Header Ads Widget

ಭಗವದ್ಗೀತೆಯು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಗಳು

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ರೋಟರಿಜಿಲ್ಲೆ 3182 ರ ರೈಲಾ - ಯುವಜನತೆ ಗಾಗಿ ರೋಟರಿಯು ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವನ್ನು ಉದ್ಘಾ ಟಿಸಿ ಆಶೀರ್ವಚನ ನೀಡುತ್ತಾ ಯುವಜನತೆ ತಮ್ಮ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಗೆ ಮೊರೆ ಹೋದರೆ ಪರಿಹಾರದೊಡನೆ ದೇವರ ಅನುಗ್ರಹವವೂ ಕೂಡಾ ದೊರಕುವುದೆಂದು ಹೇಳಿದರು. ಕಿರಿಯ ಶ್ರೀ ಗಳಾದ ಶ್ರೀ ಶ್ರೀ ಸುಶೀಂದ್ರತೀರ್ಥರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.

ಪ್ರಾರಂಭದಲ್ಲಿ ವನಿತಾ ಉಪಾದ್ಯಾಯರಿಂದ ಪ್ರಾರ್ಥನೆಯ ಬಳಿಕ ಉಡುಪಿ ರೋಟರಿ ಅದ್ಯಕ್ಷ ಗುರುರಾಜ ಭಟ್ಟರು ಸ್ವಾಗತಿಸಿದರು. ಜಿಲ್ಲಾ ರೈಲಾ ಸಭಾಪತಿ ರಾಮಚಂದ್ರ ಉಪಾ ಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಮಾಜಿ ಜಿಲ್ಲಾಗವರ್ನರ್ ಅಭಿನಂದನ ಶೆಟ್ಟಿ ಯವರು ತಮ್ಮ ದಿಕ್ಸೂಚಿ ಬಾಷಣದಲ್ಲಿ ಭವಿಷ್ಯದ ನಾಯಕತ್ವ ಎಂಬ ವಿಷಯದಬಗ್ಗೆ ಮಾತಾಡಿದರು. ಮಾಜಿಜಿಲ್ಲಾಗವರ್ನರ್ 

ರಾಜಾರಾಮ ಭಟ್ ಮತ್ತು ನಿಯೋಜಿತ ಜಿಲ್ಲಾಗವರ್ನರ್ ಬಿ.ಎಂ.ಭಟ್ ಅವರು ಶುಭಾಶಂಸನೆಗೈದರು. ಜಿಲ್ಲಾಗವರ್ನರ್ ಸಿಎ ದೇವಾನಂದರು ತಮ್ಮ ಅದ್ಯಕ್ಷೀಯ ಭಾಷಣ ದಲ್ಲಿ ರೋಟರಿಯ ಭವಿಷ್ಯದ ನಾಯಕರನ್ನು ತಯಾರುಮಾಡುವ  ಇಂತಹ ಕಾರ್ಯಕ್ರಮ ಗಳ ಸದುಪಯೋಗವನ್ನು ಪಡೆದು ಉತ್ತಮ ನಾಯಕರಾಗುವಂತೆ ಕರೆನೀಡಿದರು ಮತ್ತು ರೋಟರಿ ಉಡುಪಿಯು ಈ ಕಾರ್ಯಕ್ರಮವನ್ನು ಅತ್ಯುತ್ತಮ ವಾಗಿ ಸಂಯೋಜಿಸಿದ ಬಗ್ಗೆ ಅಭಿ ನಂದಿಸಿದರು. ಜಿಲ್ಲಾ ಕಾರ್ಯದರ್ಶಿ ರಾಮ ದೇವ ಕಾರಂತರು ದನ್ಯವಾದ ಸಮರ್ಪಿಸಿದರು.

ನಂತರ ನಡೆದ ತರಬೇತಿ ಕಾರ್ಯಕ್ರಮ ದಲ್ಲಿ ಡಾ.ರಾಘವೇಂದ್ರಹೋಳ್ಳ ಅವರು ಯುವ ನಾಯಕತ್ವದ ಬಗ್ಗೆ, ಮಿಸ್ ನಿಶಾಲ್ ಡಿಸೋಜ  ಅವರು ಪ್ರಬಾವಕಾರಿ ಸಂವಹನದ ಬಗ್ಗೆ ಮತ್ತು ಶ್ರೀ ವೇಣುಗೊಪಾಲ್ ರವರು ಉತ್ತಮ ತಂಡ ನಿರ್ಮಾಣದ ಬಗ್ಗೆ ಮಾತಾಡಿದರು.

 ಸಾಯಂಕಾಲದಲ್ಲಿ ಸಮಾರೋಪ ಕಾರ್ಯ ಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ್ ಜಗನ್ನಾತ ಕೋಟೆಯವರು ಸ್ವಾಗತಿಸಿ, ಜಿಲ್ಲಾ ರೋಟರಾಕ್ಟ ಸಭಾಪತಿ ನವೀನ್ ಅಮೀನ್ ಮತ್ತು ಜಿಲ್ಲಾ ರೋಟರಾಕ್ಟ ಪ್ರತಿನಿಧಿ ಚೇತನ್ ಕುಮಾರ್ ರವರು ಸಂದರ್ಭೋಚಿತ ವಾಗಿ ಮಾತಾಡಿದರು

. ರೊಟರಿ ಗವರ್ನರ್ ಸಿಎ ದೇವಾನಂದರು ಸಮಾರೋಪ ಬಾಷಣಮಾಡಿ ಬಾಗವಹಿಸಿದ ಮತ್ತು ಸಂಘಟಿಸಿದ ಎಲ್ಲರನ್ನು ಅಭಿನಂದಿ ಸಿದರು. ಕೊನೆಯಲ್ಲಿ ರೈಲಾ ಉಪಸಭಾಪತಿ ಚಂದ್ರಪೂಜಾರಿಯವರು ದನ್ಯವಾದ ಸಮ ರ್ಪಿಸಿದರು. 

ರೋ. ಹೇಮಂತ ಯು ಕಾಂತರು ಕಾರ್ಯಕ್ರಮ ಸಂಯೋಜಿಸಿದ್ದರು.