ನೀಲಾವರ ಗೋಶಾಲೆ ಕಂಡು ಸಂತಸಪಟ್ಟ ಹರಿದ್ವಾರದ ಪತಂಜಲಿ ಯೋಗ ಪೀಠದ ಯುವ ಸಾಧು, ಯೋಗ ಸಾಧಕರ ತಂಡ ನೀಲಾವರ ಮಹಿಷಮರ್ದಿನೀ ದೇವಸ್ಥಾನಕ್ಕೂ ಭೇಟಿ ನೀಡಿ ಅನ್ನ ಪ್ರಸಾದ ಸ್ವೀಕರಿಸಿ ಅತೀವ ಸಂತಸಪಟ್ಟಿದ್ದಾರೆ.
ಒಟ್ಟು 26 ಮಂದಿ ಇದ್ದರು.
ಉಡುಪಿಯಲ್ಲಿ ನಡೆದ ಪ್ರಾಚ್ಯ ಭಾಷಾ ಸಮ್ಮೇಳನಕ್ಕೆ ಬಾಬಾ ರಾಮ್ ದೇವ್ ಜೀ ಜೊತೆ ಆಗಮಿಸಿದ್ದರು.
ಆಚಾರ್ಯ ಮಧ್ವರ ಜನ್ಮ ಭೂಮಿ ಪಾಜಕ, ಕುಂಜಾರುಗಿರಿ ದುರ್ಗಾಲಯ, ಮಣಿಪಾಲದ ಅನಾಟಮಿ ಸಂಗ್ರಹಾಲಯ, ಹಸ್ತಶಿಲ್ಪ ಹೆರಿಟೇಜ್ ವಿಲೇಜ್, ಮಲ್ಪೆ ಸಮುದ್ರ ತೀರ, ಸೈಂಟ್ ಮೇರೀಸ್ ದ್ವೀಪಗಳಿಗೂ ಭೇಟಿ ನೀಡಿ ಇದೊಂದು ಅವಿಸ್ಮರಣೀಯ ಪ್ರವಾಸ ಎಂದು ಬಣ್ಣಿಸಿದರು.