ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಪ್ರಮುಖ ರಾಷ್ಟ್ರೀಯ ಶಿಕ್ಷಣ ಮತ್ತು ನಾವೀನ್ಯತೆ ಸ್ಪರ್ಧೆ 'ಸಾಲ್ವ್ ಫಾರ್ ಟುಮಾರೊ 2024'ರ 3ನೇ ಆವೃತ್ತಿಯ ವಿಜೇತರನ್ನು ಸ್ಯಾಮ್ ಸಂಗ್ ಘೋಷಿಸಿದ್ದು, ಇಕೋ ಟೆಕ್ ಇನ್ನೋವೇಟರ್ ಮತ್ತು ಮೆಟಲ್ ತಂಡಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.
ಅಸ್ಸಾಂನ ಗೋಲಾಘಾಟ್ ನ ಇಕೋ ಟೆಕ್ ಇನ್ನೋವೇಟರ್ ತಂಡ ಸ್ಕೂಲ್ ಟ್ರ್ಯಾಕ್ ವಿಭಾಗದಲ್ಲಿ ಕಮ್ಯುನಿಟಿ ಸಮುದಾಯ ಚಾಂಪಿಯನ್ ಪ್ರಶಸ್ತಿ ಗಳಿಸಿದರೆ, ಕರ್ನಾಟಕದ ಉಡುಪಿಯ ಮೆಟಲ್ ತಂಡ ಯೂತ್ ಟ್ರ್ಯಾಕ್ ನಲ್ಲಿ ಎನ್ವಿರಾನ್ ಮೆಂಟ್ ಚಾಂಪಿಯನ್ ಪ್ರಶಸ್ತಿ ಗಳಿಸಿದೆ.
ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಲಭ್ಯತೆ ಕುರಿತ ಪರಿಕಲ್ಪನೆ ಅಭಿವೃದ್ಧಿಪಡಿಸಿದ ಇಕೋ ಟೆಕ್ ಇನ್ನೋವೇಟರ್ ತಂಡ, ಮೂಲ ಮಾದರಿಯ ಅಭಿವೃದ್ಧಿಗಾಗಿ 25 ಲಕ್ಷ ರೂ.ಗಳ ಅನುದಾನ ಪಡೆದುಕೊಂಡಿದೆ.
ಅಂತರ್ಜಲದಿಂದ ಆರ್ಸೆನಿಕ್ ತೊಡೆಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮೆಟಲ್ ತಂಡ, ದೆಹಲಿ ಐಐಟಿಯಲ್ಲಿ ಇನ್ ಕ್ಯುಬೇಷನ್ ಗಾಗಿ 50 ಲಕ್ಷ ರೂ. ಅನುದಾನ ಪಡೆದುಕೊಂಡಿದೆ.
ಸ್ಯಾಮ್ ಸಂಗ್ ಸೌತ್ ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಮತ್ತು ಭಾರತದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ ಆರ್ಡಿನೇಟರ್ ಶೋಂಬಿ ಶಾರ್ಪ್ ಅವರು ಈ ತಂಡಗಳಿಗೆ ಪ್ರಮಾಣಪತ್ರ ಮತ್ತು ಟ್ರೋಫಿ ಪ್ರದಾನ ಮಾಡಿದರು.
ಜೊತೆಗೆ 'ಕಮ್ಯುನಿಟಿ ಚಾಂಪಿಯನ್' ಶಾಲೆ, ಶಿಕ್ಷಣಕ್ಕೆ ಸಹಾಯವಾಗಲು ಮತ್ತು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಡಿಸ್ಲ್ಪೇ ಪ್ಲಿಪ್ 75, ಫ್ರೀಸ್ಟೈಲ್ ಪ್ರೊಜೆಕ್ಟರ್ ಮತ್ತು 10 ಗ್ಯಾಲಕ್ಸಿ ಟ್ಯಾಬ್ ಎಸ್10+ ಸೇರಿದಂತೆ ಸ್ಯಾಮ್ ಸಂಗ್ ಉತ್ಪನ್ನಗಳನ್ನು ಸ್ವೀಕರಿಸಲಿದೆ. ಅಂತೆಯೇ, 'ಎನ್ವಿರಾನ್ಮೆಂಟ್ ಚಾಂಪಿಯನ್' ಪ್ರಶಸ್ತಿ ಪಡೆದ ಕಾಲೇಜು ಸಾಮಾಜಿಕ ಉದ್ಯಮಶೀಲತೆ ಮನೋಭಾವ ಉತ್ತೇಜಿಸಲು ಸ್ಮಾ ಡಿಸ್ ಪ್ಲೇ ಫ್ಲಿಪ್ 75, ಫ್ರೀಸ್ಟೈಲ್ ಪ್ರೊಜೆಕ್ಟರ್ ಮತ್ತು 10 ಗ್ಯಾಲಕ್ಸಿ ಬುಕ್ 4 ಪ್ರೊ ಲ್ಯಾಪ್ ಟಾಪ್ ಉತ್ಪನ್ನಗಳನ್ನು ಸ್ವೀಕರಿಸಲಿದೆ.
ಅಂತಿಮ ಹಂತದಲ್ಲಿ ಭಾಗವಹಿಸಿದ ಪ್ರತೀ 10 ತಂಡಗಳು ರೂ. 1 ಲಕ್ಷ ಮತ್ತು ಎಲ್ಲಾ ಸದಸ್ಯರು ಪ್ರಮಾಣಪತ್ರ ಪಡೆದುಕೊಂಡರು. ಜೊತೆಗೆ ಸ್ಕೂಲ್ ಟ್ರ್ಯಾಕ್ ನಲ್ಲಿ ಭಾಗವಹಿಸಿದವರು ಗ್ಯಾಲಕ್ಸಿ ವಾಚ್ ಅಲ್ಟ್ರಾ ಪಡೆದರು. ಯೂತ್ ಟ್ರ್ಯಾಕ್ ನಲ್ಲಿ ಭಾಗವಹಿಸಿದವರು ಗ್ಯಾಲಕ್ಸಿ ಝಡ್ ಪ್ಲಿಪ್ 6 ಉತ್ಪನ್ನ ಪಡೆದರು.
ಈ ಕುರಿತು ಮಾತನಾಡಿರುವ ಸ್ಯಾಮ್ ಸಂಗ್ ಸೌತ್ ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಅವರು, "ಸ್ಯಾಮ್ ಸಂಗ್ ನಲ್ಲಿ ಈ ವರ್ಷದ 'ಸಾಲ್ವ್ ಫಾರ್ ಟುಮಾರೊ' ಆವೃತ್ತಿಯಲ್ಲಿ ಭಾಗವಹಿಸಿದ ಎಲ್ಲರೂ ಪ್ರದರ್ಶಿಸಿದ ನಾವೀನ್ಯತೆ ಮತ್ತು ಸೃಜನಶೀಲತೆ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ನಮ್ಮ ಪ್ರಮುಖ ಸಿಎಸ್.ಆರ್ ಉಪಕ್ರಮದ ಮೂಲಕ ಯುವ ಮನಸ್ಸುಗಳಿಗೆ ಅವರ ಸುತ್ತಮುತ್ತಲಿನ ಮತ್ತು ಪರಿಸರದಲ್ಲಿನ ಕೆಲವು ಸಂಕೀರ್ಣ ಸವಾಲುಗಳಿಗೆ ಪರಿಹಾರ ಹುಡುಕಲು ಅಗತ್ಯವಿರುವ ಪರಿಕರಗಳು, ಮಾರ್ಗದರ್ಶನ ಮತ್ತು ಅವಕಾಶ ಒದಗಿಸುವ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದ್ದೇವೆ.
ಇಕೋ ಟೆಕ್ ಇನ್ನೋವೇಟರ್ ಮತ್ತು ಮೆಟಲ್ ತಂಡದ ಸಾಧನೆಗಳು ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸುವ ಮುಂದಿನ ಪೀಳಿಗೆಯ ಸಾಮರ್ಥ್ಯವನ್ನು ತೋರಿಸಿಕೊಟ್ಟಿವೆ. ಈ ಯುವ ನವೋದ್ಯಮಿಗಳ ಆಲೋಚನೆಗಳು ಶಾಶ್ವತವಾದ ಬದಲಾವಣೆ ಉಂಟುಮಾಡುವುದನ್ನು ನಾವು ಎದುರುನೋಡುತ್ತೇವೆ' ಎಂದರು.