Header Ads Widget

ನನಗಿರುವುದು ಒಂದೇ ಮನೆ ,ಒಬ್ಬಳೇ ಹೆಂಡತಿ : ಸಂತೋಷ್ ಹೆಗ್ಡೆ ಉವಾಚ

ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಹಗರಣವೊಂದರ ತನಿಖೆ ಮಾಡಿದ ಸಂದರ್ಭದಲ್ಲಿ ಅವರು ನನಗೆ ಕರೆ ಮಾಡಿ ಏರುಧ್ವನಿಯಿಂದ ಗದರಿಸಿದರು .‌ಆಗ ನಾನು ಹೇಳಿದೆ.‌ನಿಮ್ಮ‌ಏರುಧ್ವನಿಯ ಗದರಿಕೆ ಬೇಕಿಲ್ಲ . ಭೂಲೋಕದಲ್ಲಿ ನನಗೆ ಇರುವುದು ನನಗೆ ಒಂದೇ ಮನೆ ; ಒಬ್ಬಳೇ ಹೆಂಡತಿ. ನಿಮ್ಮ ಅಪ್ಪನಂತೆಯೇ ನನ್ನ ತಂದೆಯವರೂ ರಾಜಕಾರಣಿಯಾಗಿದ್ದವರು ಆದರೆ ಭ್ರಷ್ಟರಾಗಿರಲಿಲ್ಲ.‌ ನನ್ನ ಊರು ನನ್ನ ಮನೆ ನನ್ನ ಶಾಲೆಗಳು ನನಗೆ ದುರಾಸೆ ಮತ್ತು ದೇಶದ ಸಂಪತ್ತನ್ನು ಲೂಟಿಹೊಡೆಯುವಂತೆ ಹೇಳಿ ಕೊಟ್ಟಿಲ್ಲ‌.‌ "

ಇವತ್ತಿನ ತನಕ ರಾಜ್ಯದ 1836 ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡ್ತಾ ಇದ್ದೇನೆ. ಇದಲ್ಲದೇ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾ ಇದ್ದೇನೆ. ಆದರೆ ಯಾರಿಂದಲೂ ಒಂದು ಪೈಸೆ ಖರ್ಚು ಪಡೆಯದೇ ನನ್ನ ಕಿಸೆಯಿಂದಲೇ ವ್ಯಯಿಸುತ್ತಿದ್ದೇನೆ ಎಂದು ನ್ಯಾ‌‌ ಸಂತೋಷ್ ಹೆಗ್ಡೆ ವಿವರಿಸಿದರು.