Header Ads Widget

ಅಭಿವೃದ್ಧಿ ಹೊಂದಿದ ಭಾರತ ನೋಡಲು ಖರ್ಗೆ ಬದುಕಿರಬೇಕು: ಅಮಿತ್ ಶಾ

 

ಅಭಿವೃದ್ಧಿ ಹೊಂದಿದ ಭಾರತವ ನೋಡಲು ನೀವು ಬದುಕಿರಬೇಕು, ದೀರ್ಘ ಆಯುಷ್ಯ ನಿಮ್ಮದಾಗಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನನಗೆ ಈಗ 83 ವರ್ಷ, ಪ್ರಧಾನಿ ಮೋದಿಯನನ್ನು ಕುರ್ಚಿಯಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದು ಹೇಳಿಕೆ ನೀಡಿದ್ದ ಖರ್ಗೆಗೆ ಶಾ ಪ್ರತ್ಯುತ್ತರ ನೀಡಿದ್ದಾರೆ. ಖರ್ಗೆಯವರು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅವಮಾನಕರವಾಗಿ ಮಾತನಾಡಿದ್ದಾರೆ, ಅನಾವಶ್ಯಕವಾಗಿ ವೈಯಕ್ತಿಕ ವಿಚಾರಗಳಿಗೆ ಮೋದಿಯವರನ್ನು ಎಳೆದು ತಂದಿದ್ದಾರೆ. ಪ್ರಧಾನಿ ಮೋದಿಯವರ ಮೇಲೆ‌ ಎಷ್ಟು ದ್ವೇಷ ಇದೆ ಎನ್ನುವುದನ್ನು ತೋರಿಸುತ್ತದೆ. ಖರ್ಗೆಯವರ ಆರೋಗ್ಯ ಸುಧಾರಿಸಲಿ ಎಂದು ಮೋದಿಯವರು ಹಾಗೂ ನಾನು ಪ್ರಾರ್ಥನೆ ಮಾಡುತ್ತೇನೆ ಮೋದಿ 2047 ಅಭಿವೃದ್ಧಿ ಹೊಂದಿದ ಭಾರತವನ್ನು ನೋಡುವವರೆಗೂ ಬದುಕಿರಲಿ ಎಂದು ಹೇಳಿದ್ದಾರೆ. ಜಮ್ಮುವಿನ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಖರ್ಗೆ ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದರು.