Header Ads Widget

ಗುಜರಾತ್ ನ ಅಂಬಾಜಿ ದೇವಸ್ಥಾನಕ್ಕೆ ಶೀರೂರು ಶ್ರೀ ಭೇಟಿ

 

ಭಾವಿಪರ್ಯಾಯ ಪೀಠಾಧೀಶರಾದ ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಸಂಚಾರ ನಿಮಿತ್ತ ಗುಜರಾತ್ ನ ಅಂಬಾಜಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನವನ್ನು ಪಡೆದರು. ಶ್ರೀಕೃಷ್ಣ ನಿಗೆ ಚೌಲ ಕರ್ಮ ನಡೆದ ಸ್ಥಳ ಎಂದು ಪ್ರತೀತಿ ಇದೆ. ಇಲ್ಲಿಯ ಗೋಪುರ ಶ್ರೀಚಕ್ರದ ಮಾದರಿಯಲ್ಲಿದ್ದು 150 ಕೆ.ಜಿ ಬಂಗಾರದಿಂದ ಮಾಡಲ್ಪಟ್ಟಿದೆ.