ಡಿಕೆ ಶಿವಕುಮಾರ್ ಮಾತು ಕೇಳಿದರೆ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಮುಖಂಡ ಸ್ಪರ್ಧಿಸಲಿದ್ದಾರೆ. ಇವತ್ತು ನಗರರ ಖಾಸಗಿ ಕಾಲೇಜೊಂದರಲ್ಲ್ಲಿ ಚನ್ನಪಟ್ಟಣದ ಕಾರ್ಯಕರ್ತರೊಡನೆ ಮಾತುಕತೆ ನಡೆಸಿ ನಗುತ್ತಾ ಹೊರಬಂದ ಶಿವಕುಮಾರ್, ಚನ್ನಪಟ್ಟಣದಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಸ್ಪರ್ಧಿಸುತ್ತಿಲ್ಲ, ನಿನ್ನೆ ರಾತ್ರಿಯೆಲ್ಲ ಸಭೆ ನಡೆಸಿದ್ದರ ಬಗ್ಗೆ ಯಾರೋ ಫೋನ್ ಮಾಡಿ ವಿಷಯ ತಿಳಿಸಿದರು, ಜೆಡಿಎಸ್ ನಾಯಕರು ಅಷ್ಟೊಂದು ದುರ್ಬಲ ಹಾಗೂ ಅಷ್ಟು ಬೇಗ ಹೆದರುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಎದೆಗುಂದುವ ಅವಶ್ಯಕತೆಯಿಲ್ಲ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದ ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದನ್ನು ಮಾತ್ರ ತಿಳಿಸದೆ ಗೌಪ್ಯವಾಗಿಟ್ಟರು.