ತುಮಕೂರಿನಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸರ್ವ ಸಧಸ್ಯರ ಮಹಾಅಧಿವೇಶನದಲ್ಲಿ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ದಲಿತ ಸಂಘರ್ಷ ಸಮಿತಿ ಹುಟ್ಟಿದಾಗಿನಿಂದಲೂ ಸತತ ನಲವತ್ತು ವರ್ಷಕ್ಕೂ ಮಿಕ್ಕಿ ಉಡುಪಿಯಲ್ಲಿ ದಲಿತ ಚಳುವಳಿಯನ್ನು ಕಟ್ಟಿ ನಡೆಸಿಕೊಂಡು ಬರುತ್ತಿರುವ , ಉಡುಪಿ ಜಿಲ್ಲೆಯ ಅಪ್ರತಿಮ ದಲಿತ ನಾಯಕ ಪ್ರಗತಿಪರ ಹೋರಾಟಗಾರ ಶ್ರಿಯುತ ಸುಂದರ ಮಾಸ್ತರ್ ಇಂದು ದ.ಸಂ.ಸ.ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾಗಿ ಆಯ್ಕೆಯಾದರು. ಉಡುಪಿ ಜಿಲ್ಲೆಯ ಶೋಷಿತ ಸಮೂದಾಯದ ಧ್ವನಿಯಾಗಿರುವ ಸುಂದರ ಮಾಸ್ತರ್ ಅವರಿಗೆ ಉಡುಪಿ ಜಿಲ್ಲೆಯ ದ.ಸಂ.ಸ. ಅಂಬೇಡ್ಕರ್ ವಾದದ ಸರ್ವ ಸಧಸ್ಯರ ಪರವಾಗಿ ಅಭಿನಂದನೆಗಳು.