ನಾಳಿನ ಹುಣ್ಣಿಮೆ (ಅಕ್ಟೋಬರ್ 17)ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್ಗಳಲ್ಲಿ ಸಂಭ್ರಮದ ಸೂಪರ್ಮೂನ್.
ಹಾಗೆ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು.
ಆದರೇನು ಮಾಡೋಣ.
ಮಳೆ ಮಳೆ ಮಳೆ.
ನಿಮ್ಮೂರಿಗೆ ಮುಸ್ಸಂಜೆಯಲ್ಲಾದರೂ ಮೋಡವಿಲ್ಲದ ಆಕಾಶವಿದ್ದರೆ ಪೂರ್ವ ಆಕಾಶದಲ್ಲಿ ಚಂದದ ಚಂದ್ರನನ್ನ ಹಾಗೂ ಪಶ್ಚಿಮ ಆಕಾಶದಲ್ಲಿ ಧೂಮಕೇತುವನ್ನ ನೋಡಲು ಮರೆಯದಿರಿ.
ಡಾ. ಎ ಪಿ ಭಟ್ ಉಡುಪಿ.