ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ 2024-25 ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಯೋಗಾಸನ ತಂಡವನ್ನು ಪ್ರತಿನಿಧಿಸಿದ ನಿರೀಕ್ಷಾ ಮತ್ತು ತನ್ವಿತಾ (ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಕುಂದಾಪುರ) ಪ್ರಥಮ ಸ್ಥಾನ ಹಾಗೂ ರಿಥಮಿಕ್ ಯೋಗದಲ್ಲಿ ತನುಶ್ರೀ ( ಸಂತ ಸಿಸಿಲಿ ಪ. ಪೂ ಕಾಲೇಜು ಉಡುಪಿ) ಪ್ರಥಮ ಪಡೆದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.