ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ನಾಲ್ಕನೆಯ ಸೆಮಿಸ್ಟರ್ ನ ವಿದ್ಯಾರ್ಥಿ- ಶಿಕ್ಷಕರು ಕ್ಷೇತ್ರ ಕಾರ್ಯದ ಅಂಗವಾಗಿ ಉಡುಪಿ ತಾಲೂಕು ಪಟ್ಲ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಈಚೆಗೆ ಭೇಟಿ ನೀಡಿದರು. ಶಾಲೆಯ ಸ್ಥಾಪನೆ, ಉದ್ದೇಶಗಳು, ಸಮಾಜ ಕಲ್ಯಾಣ ಇಲಾಖೆ ಮತ್ತು ವಿದ್ಯಾ ಇಲಾಖೆ ಒದಗಿಸುವ ಅನುದಾನ ಮತ್ತು ಮಾರ್ಗದರ್ಶನ, ಪಠ್ಯಕ್ರಮ, ಪರೀಕ್ಷಾಪದ್ಧತಿ, ವಿದ್ಯಾರ್ಥಿ ಪ್ರವೇಶ ಪ್ರಕ್ರಿಯೆ, ವಸತಿ ಹಾಗೂ ಆಹಾರ ಸೌಕರ್ಯ, ಶಿಕ್ಷಕರ ಕಾರ್ಯಭಾರ ಇವೇ ಮುಂತಾದ ಸಂಗತಿಗಳನ್ನು ಈ ಭೇಟಿಯ ಸಮಯದಲ್ಲಿ ವಿಶದವಾಗಿ ತಿಳಿದುಕೊಂಡರು. ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀ ಕೃಷ್ಣಮೂರ್ತಿ ವಿದ್ಯಾರ್ಥಿ ಶಿಕ್ಷಕರಿಗೆ ಬೇಕಾದ ಸಕಲ ಮಾಹಿತಿಗಳನ್ನೂ ಒದಗಿಸಿದರು. ಹುರಿಯ ಶಿಕ್ಷಕಿ ಕಲಾವತಿ ವಿದ್ಯಾರ್ಥಿ- ಶಿಕ್ಷಕರಿಗೆ ವಿವಿಧ ವಿಭಾಗಗಳನ್ನು ಪರಿಚಯಿಸಿದರು.ಕಾಲೇಜಿನ ಪರವಾಗಿ ಶ್ರೀ ಮತಿ ಮಮತಾ ಸಾಮಂತ್ ವಿದ್ಯಾರ್ಥಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು. ಕುಮಾರಿ ನಿರುತ ಭಟ್ ಆಭಾರ ಮನ್ನಿಸಿದರು.