Header Ads Widget

ಯುಪಿಎಂಸಿ~ಎನ್ ಎಸ್ ಎಸ್ ಮತ್ತು ದಿಶಾ ಮಹಿಳಾ ಘಟಕ


ಸೈಬರ್ ಕ್ರೈಂ ಮತ್ತು ಪೋಕ್ಸೋ ಕಾಯ್ದೆ ಮಾಹಿತಿ ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ದಿಶಾ ಮಹಿಳಾ ಸಂಘದ ವತಿಯಿಂದ ಅಕ್ಟೋಬರ್ 8 ರಂದು ಸೈಬರ್ ಕ್ರೈಂ ಮತ್ತು ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು.

ಕರಾವಳಿ ಕಾವಲು ಪೊಲೀಸ್ ಪಡೆ ಮಲ್ಪೆ ಇದರ ಉಪ ನಿರೀಕ್ಷಕರಾದ ಶ್ರೀಮತಿ ಮುಕ್ತಾ ಬಾಯಿ ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ಮನೆಯ ಬಾಂಧವ್ಯ ತುಂಬಾ ಉತ್ತಮವಾಗಿರಬೇಕು ಪೋಷಕರೊಂದಿಗೆ ಮಾತನಾಡಿ ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತ, ವಿವಿಧ ಉದಾಹರಣೆಗಳ ಮೂಲಕ ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ನ ಅಡಿಯಲ್ಲಿರುವ ಕಾನೂನು ಮಾಹಿತಿಯನ್ನು ನೀಡಿ, ಸೈಬರ್ ಕ್ರೈಂ ಸಂಬಂಧಿಸಿದಂತೆ ಸಹಾಯವಾಣಿ 1930 ಗೆ ಕರೆ ಮಾಡಿ  ಎಂದು ಕರೆಕೊಟ್ಟರು.

ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀ ರಾಧಾಕೃಷ್ಣ ರಾವ್ ಅಧ್ಯಕ್ಷರಾಗಿದ್ದರು.

ಕರಾವಳಿ ಕಾವಲು ಪಡೆ ಪೊಲೀಸ್ ಸಿಬ್ಬಂದಿ ಶ್ರೀ ದಿನೇಶ್ ಶೆಟ್ಟಿ ಉಪಸ್ಥಿರಿದ್ದರು.

ದಿಶಾ ಸಂಘದ ಸಹ ಸಂಚಾಲಕಿ ಕುಮಾರಿ ಇಂದಿರಾ ಸ್ವಾಗತಿಸಿದರು, ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ವಂದಿಸಿದರು.

ದಿಶಾ ಸಂಘದ ಸಂಚಾಲಕಿ ಶ್ರೀಮತಿ ಜಯಲಕ್ಷ್ಮಿ ಜಿ ಕಾರ್ಯಕ್ರಮ ನಿರೂಪಿಸಿದರು.