Header Ads Widget

ಕಷ್ಟ ಕಾರ್ಪಣ್ಯಗಳಲ್ಲಿ ಬದುಕಿದ ಮಹಿಳೆಯರು ಎಂದೆಂದಿಗೂ ಗಟ್ಟಿಯಾಗಿ ಇರುತ್ತಾರೆ: ವೈದೇಹಿ

ಕಷ್ಟಕಾರ್ಪಣ್ಯಗಳಲ್ಲಿ ಬದುಕನ್ನು ನಿರ್ವಹಿಸಿದ ಬಹುತೇಕ ಮಹಿಳೆಯರು ಗಟ್ಟಿಯಾಗಿ ಇದ್ದು ಬದುಕನ್ನು ಗೆಲ್ಲುತ್ತಾರೆ ಎಂದು ವೈದೇಹಿ ಹೇಳಿದರು. ಬೆಳಗಾವಿ ಜಿಲ್ಲೆಯ ವೈದೇಹಿ ಅಭಿಮಾನಿಗಳ ಸೌಜನ್ಯ ಭೇಟಿಯ ಸಮಯದಲ್ಲಿ ಮಾತನಾಡುತ್ತಾ ತಮ್ಮ ಕ್ರೌಂಚ ಪಕ್ಷಿಗಳು ಕಥೆಯನ್ನು ಉಲ್ಲೇಖಿಸುತ್ತಾ ಪಾತ್ರಗಳು ಗಟ್ಟಿಯಾಗಿ ಉಳಿಯಲು ಬದುಕಿನ ಸವಾಲುಗಳು ಸಹಾಯ ಮಾಡುತ್ತವೆ ಎಂದರು. ಅವರ ಅಭಿಮಾನಿ ಮತ್ತು ಬೆಳಗಾವಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಉಪಯುಕ್ತ ಸಂಗಪ್ಪ ಕೋಳಿ ಮತ್ತು ಉಡುಪಿ ಜಿಲ್ಲೆಯ ವಾಣಿಜ್ಯ ತೆರಿಗೆ ಉಪಯುಕ್ತ ಹೊಳೆಯಪ್ಪ ಮತ್ತು ಅಧಿಕಾರಿ ಕಾರ್ತಿಕ್ ಧರ್ಶನ್ ರವರೊಂದಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು. 

ಸಾಹಿತ್ಯ ಅಭಿಮಾನಿಗಳ ಪ್ರೀತಿಗೆ ಲೇಖಕಿ ವೈದೇಹಿಯವರು ವಂದಿಸಿದರು.