Header Ads Widget

ವಿದ್ಯಾಪೋಷಕ್ ವಿದ್ಯಾರ್ಥಿನಿಯ ಮನೆಗೆ ಶಿಲಾನ್ಯಾಸ

 

ವಿದ್ಯಾಪೋಷಕ್ ವಿದ್ಯಾರ್ಥಿನಿ ಸೌಜನ್ಯಾ (ತೃತೀಯ ಇಂಜಿನೀಯರ್) ಇವಳಿಗೆ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ನಿರ್ಮಿಸಲಿರುವ ಮನೆಗೆ ಇಂದು (೨೮-೧೦-೨೦೨೪) ಶಿರ್ವದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿಯವರು ಶಿಲಾನ್ಯಾಸಗೈದರು. ಇಂದು ರವೀಂದ್ರ ಶೆಟ್ಟಿಯವರಿಗೆ ೬೦ನೇ ಹುಟ್ಟುಹಬ್ಬ ಹಾಗೂ ವಿವಾಹದ ೩೦ನೇ ವರ್ಷವಾಗಿದ್ದು, ಇದನ್ನು ಓರ್ವ ಪ್ರತಿಭಾನ್ವಿತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿಕೊಟ್ಟು ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಿಸಿದ್ದು, ಇನ್ನೆರಡು ತಿಂಗಳಲ್ಲಿ ಈ ಮನೆಯನ್ನು ಪೂರ್ಣಗೊಳಿಸಲಾಗುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತಿಳಿಸಿದರು. ಆರು ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡ ಸೌಜನ್ಯಾಳಿಗೆ ಪಂಚಾಯತ್ ನೀಡಿದ ೨.೫ ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಲಾಗುವುದೆಂದು ಕಾರ್ಯದರ್ಶಿ ಮುರಲಿ ಕಡೆಕಾರ್ ನುಡಿದರು. ಈ ಸಂದರ್ಭದಲ್ಲಿ ರವೀಂದ್ರ ಶೆಟ್ಟಿಯವರ ಪತ್ನಿ ಸುಕನ್ಯಾ, ಪುತ್ರ ವರುಣ್ ಶೆಟ್ಟಿ, ಸಂಸ್ಥೆಯ ಸದಸ್ಯರಾದ ವೇದಮೂರ್ತಿ ಸೀತಾರಾಮ ಭಟ್, ಆರೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಗುರುರಾಜ ರಾವ್, ಮಾಜಿ ಅಧ್ಯಕ್ಷ ರಾಜು ಕುಲಾಲ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಸದಸ್ಯರಾದ ಗಣೇಶ್ ಬ್ರಹ್ಮಾವರ ಹಾಗೂ ಸೌಜನ್ಯಾಳ ತಾಯಿ ಪ್ರೇಮಾ ಆಚಾರ್ಯ ಉಪಸ್ಥಿತರಿದ್ದರು.