Header Ads Widget

ಪಡುಬಿದ್ರಿ : ಚಾಲಕನ ನಿದ್ರೆ ಮಂಪರಿನಿಂದ ಸರಣಿ ಅಪಘಾತ!

ತೆಂಕ ಎರ್ಮಾಳು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಒರ್ವ ಗಾಯಗೊಂಡು ಮೂರು ವಾಹನಗಳು ಜಖಂಗೊಂಡಿದೆ.

ಗೂಡ್ಸ್ ಟೆಂಪೊವೊಂದು ಎರ್ಮಾಳು ಜಂಕ್ಷನ್ ನ ಸತ್ಕಾರ್ ಹೊಟೇಲ್ ಮುಂಭಾಗ ರಸ್ತೆ ಬಿಟ್ಟು ನಿಂತಿದ್ದು, ಮಂಗಳೂರು ಕಡೆಯಿಂದ ವೇಗವಾಗಿ ಬಂದ ಹೊಂಡಾ ಸಿಟಿ ಕಾರೊಂದು ನೇರವಾಗಿ ರಸ್ತೆಬಿಟ್ಟು ಕೆಳಗಿಳಿದು ಗೂಡ್ಸ್ ಟೆಂಪೊಗೆ ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ಟೆಂಪೊ ಹೊಟೇಲ್ ನ ಮುಂಭಾಗಕ್ಕೆ ಹಾರಿ ಅಲ್ಲೇ ನಿಲ್ಲಿಸಲಾಗಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಅಟೋ ರಿಕ್ಷಾದೊಂದಿಗೆ ಟೆಂಪೊ ಕೂಡಾ ಅಡ್ಡ ಬಿದ್ದು ಜಖಂಗೊಂಡಿದೆ. ಕಾರು ಬಹುತೇಕ ಜಖಂಗೊಂಡು ಮರಳಿ ಮಂಗಳೂರು ಕಡೆಗೆ ತಿರುಗಿ ನಿಂತಿದೆ.

ಕಾರು ಚಾಲಕ ಪುತ್ತೂರು ನಿವಾಸಿ ಸುಜೀತ್ (30)ಕಣ್ಣು ಹಾಗೂ ಮೂಗಿಗೆ ಗಾಯಗೊಂಡಿದ್ದು ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಉಡುಪಿ ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ. ಸದಾ ಹೊತ್ತು ಈ ಹೋಟೆಲ್ ಮುಂಭಾಗ ಕಾಫಿ ಕುಡಿಯಲು ಬರುವವರು ಇರುತ್ತಿದ್ದು, ಅದೃಷ್ಟವಶಾತ್‌‌ ಯಾರೂ ಆ ಸಂದರ್ಭ ಇಲ್ಲದ್ದರಿಂದ ಬಾರೀ ದುರಂತ ತಪ್ಪಿದಂತ್ತಾಗಿದೆ. ಸಾರ್ವಜನಿಕರು ಹೆದ್ದಾರಿಗಡ್ಡವಾಗಿ ನಿಂತಿದ್ದ ಅಪಘಾತ ಕಾರನ್ನು ಪಕ್ಕಕ್ಕೆ ದೂಡಿ ಹೆದ್ದಾರಿ ಸಂಚಾರ ಮುಕ್ತಗೊಳಿಸಿದ್ದಾರೆ.