ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಸರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಳ್ಳುತ್ತಿದೆ.
ದುರ್ಗಾಷ್ಟಮಿಯ ಪರ್ವ ಕಾಲದಲ್ಲಿ ಶ್ರೀ ಕ್ಷೇತ್ರಕ್ಕೆ ಹರಕೆಯ ರೂಪದಲ್ಲಿ ಭಕ್ತರು ಅವರು ಚಿನ್ನದ ತ್ರಿಶೂಲವನ್ನು ಸಮರ್ಪಿಸಿದರು.. ಜೋಡಿ ಚಂಡಿಕಾಯಾಗದಲ್ಲಿ ಒಂದು ಯಾಗವು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಮತ್ತು ನಾಗರಾಜ ದಂಪತಿ ಗಳಿಂದ ಸಮರ್ಪಿತವಾಯಿತು ಮತ್ತೊಂದು ಚಂಡಿಕಾಯಾಗ ಶ್ರೀ ರಾಜೇಂದ್ರ ಪ್ರಸಾದ್ ಮತ್ತು ಶ್ರೀಮತಿ ಪ್ರೇಮ ರಾಜೇಂದ್ರ ಪ್ರಸಾದ್ ದಂಪತಿಗಳ ಪರವಾಗಿ ಕ್ಷೇತ್ರದಲ್ಲಿ ಸಮರ್ಪಣೆಗೊಂಡಿತು.. ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕರಾಧನೆ ಗಳು ನೆರವೇರಿತು..
ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯಸೇವೆ ದುರ್ಗಾ ಆದಿಶಕ್ತಿಗೆ ಅಭಿಮುಖವಾಗಿ ದರ್ಪಣ ಅಕಾಡೆಮಿಯ ವಿದುಷಿ. ದಕ್ಷ ಅವರ ಶಿಷ್ಯ ತನ್ಮಯಿ ಅಡಿಗ, ಡಾಕ್ಟರ್ ಮಂಜರಿ ಚಂದ್ರ ಪುಷ್ಪರಾಜ್ ಸೃಷ್ಟಿ ಕಲಾ ಕುಟೀರದ ಅನ್ನಪೂರ್ಣ, ಧನ್ವಿ ನಿಧಿ ವಿದುಷಿ ಅಮೃತ ಆಶ್ಲೇಷ ಅವರ ಶಿಷ್ಯ ಯುತಿಕಾ, ಲಕ್ಷ್ಮಿ ಜನಾರ್ದನ ಭಜನಾ ಮಂಡಳಿ ಹಾಗೂ ಶ್ರೀಮಾತಾ ಭಜನಾ ಮಂಡಳಿ ಹಾಗೂ ಶ್ರೀ ಮಾತಾ ಭಜನಾ ಮಂಡಳಿಯ ಬಜಕರಿಂದ ಬಜಕೆನ್ನೆ ಸಂಕೇತನೆ, ವಿದುಷಿ ಶ್ರಾವ್ಯ ಮತ್ತು ಬಳಗದವರಿಂದ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ನೃತ್ಯ ವೈವಿಧ್ಯ
ರಾತ್ರಿ ರಂಗ ಪೂಜ ಸಹಿತ ಕಲ್ಪೋಕ್ಷ ಪೂಜೆ ನಂತರ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ವಿದುಷಿ ಶಾಂಭವಿ ನೇತೃತ್ವದ ನರ್ತಕಿ ನೃತ್ಯ ಅಕಾಡೆಮಿಯ ನೃತ್ಯಾರ್ತಿಗಳಿಂದ ನೃತ್ಯ ಸೇವೆ ನೆರವೇರಿತು..
ಮಧ್ಯಾಹ್ನ ನೆರವೇರಿದ ಅನ್ನಪ್ರಸಾದದಲ್ಲಿ ಸಹಸ್ರಾರು ಭಕ್ತರಗಳು ಪ್ರಸಾದ ಸ್ವೀಕರಿಸಿದರು.. ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಗಣ್ಯಾತಿ ಗಣ್ಯರು ಆಗಮಿಸಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳುತ್ತಿದ್ದಾರೆ.
ದಾಂಡಿಯ ಗರ್ಭ ನೃತ್ಯ : ನವಮಿಯ ಪರ್ವಕಾಲದಲ್ಲಿ ಅಂದರೆ ಇಂದು ಶ್ರೀ ಕ್ಷೇತ್ರದ ಆದಿಶಕ್ತಿ ಸಭಾಭವನದಲ್ಲಿ ಗುಜರಾತಿನ ಗೆಳೆಯ ಗೆಳತಿಯರ ಬಳಗ ದಾಂಡಿಯ ಹಾಗೂ ಗರ್ಭ ನೃತ್ಯವನ್ನು ಪ್ರದರ್ಶಿಸಲಿಕ್ಕಿದ್ದಾರೆ. ಸ್ಥಳೀಯ ಆಸಕ್ತರು ಕೂಡ ಪಾಲ್ಗೊಳ್ಳ ಬಹುದು.
ತಾರೀಕು 12ರ ಶನಿವಾರ - ವಿಜಯದಶಮಿ - ತ್ರಿಲೋಕೇಶ್ವರಿ ಮಹಾಯಾಗ : ತಾರೀಕು 12ರ ಶನಿವಾರದಂದು ವಿಜಯದಶಮಿಯ ಪರ್ವಕಾಲದಲ್ಲಿ ಲೋಕೇಶ್ವರಿ ಮಹಾಯಾಗ ಸಾಮೂಹಿಕವಾಗಿ ಸಂಪನ್ನಗೊಳ್ಳಲಿದೆ..
ಈ ಮಹಾನ್ ಯಾಗವು ಬೆಳಿಗ್ಗೆ ಏಳುವರೆ ಗಂಟೆಗೆ ಸರಿಯಾಗಿ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದ್ದು ಬೆಳಿಗ್ಗೆ ಗಂಟೆ 10:30ಗೆ ಸರಿಯಾಗಿ ಪೂರ್ಣ ಆಹುತಿಯನ್ನು ಕಾಣಲಿದೆ..
ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಯಾಗ ಆರಂಭವಾಗಲಿದ್ದು ಏಕ ಕಾಲದಲ್ಲಿ ಮೂರು ಕುಂಡಗಳಲ್ಲಿ ಯಾಗ ಪೂರ್ಣಹುತಿಯನ್ನು ಕಾಣಲಿದೆ.. ಯಾಗದ ಅಂಗವಾಗಿ ಬ್ರಾಹ್ಮಣ ಸುಹಾಸಿನಿ ಆರಾಧನೆ ಕನ್ನಿಕಾರಾದನೆಗಳು ನೆರವೇರಲಿವೆ . ಆಹಾಹಾ ನಂತರ ಮಹಾಪೂಜೆ ಪಲ್ಲಪೂಜೆ ಪಂಚಭಕ್ಷ ಸಹಿತವಾದ ಮಹಾ ಅನ್ನಸಂತರ್ಪಣೆ ನೆರವೇರಲಿದೆ..
ಸಂಜೆ ಗಂಟೆ ಆರರಿಂದ ಆರಾಧನಾ ರಂಗ ಪೂಜಾ ಮಹೋತ್ಸವ ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ನೆರವೇರಲಿದೆ.. ತಾರೀಕು 13ರ ಭಾನುವಾರ ಮಹಾಮಂತ್ರಿಕ್ಷತೆ ಮಹಾಸಂಪ್ರೋಕ್ಷಣೆ ನೆರವೇರಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.. ಗತಕಾಲದ ಕ್ಷೇತ್ರ ಪರಂಪರೆ ಮತ್ತೆ ಮರುಕಳಿಸುವಂತೆ ಕ್ಷೇತ್ರ ಕ್ಷೇತ್ರದಲ್ಲಿ ವಿಜಯದಶಮಿಯ ಪರ್ವಕಾಲದ ಯಾಗದ ಪೂರ್ಣಹುತಿ ನೆರವೇರಲಿದೆ ಎಂದು ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..