ಉಡುಪಿ ನಗರದ ಚರ್ಚ್‌ವೊಂದರ ವಿದ್ಯಾ ಜ್ಯೋತಿ ಬಿಲ್ಡಿಂಗ್ ನ ಪಟಾಕಿ ಮಾರಾಟದ ಅಂಗಡಿಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಂಭಾಗವಿರುವ ಕಾಬ್ರಾಲ್ ಗನ್ ಹೌಸ್ ನಲ್ಲಿ ಪರವಾನಗಿ ಇಲ್ಲದೆ ಸುಡುಮದ್ದುಗಳ ಅಕ್ರಮ ದಾಸ್ತಾನು ಬಗ್ಗೆ ದೊರೆತ ಮಾಹಿತಿಯಂತೆ ನಗರ ಠಾಣಾ ಉಪನಿರೀಕ್ಷಕ ಪುನೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಕಾಬ್ರಾಲ್ ಅವರು ಒಟ್ಟು 40 ಕೆ.ಜಿ. ತೂಕದ ಪಟಾಕಿ ಮತ್ತು ಸುಡುಮದ್ದುಗಳನ್ನು ಮುಂಜಾಗೃತ ಕ್ರಮ ಕೈಗೊಳ್ಳದೇ ಹಾಗೂ ಪರವಾನಗಿ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಸಂಗ್ರಹಿಸಿದ್ದು, ಅವುಗಳನ್ನು ವಶ ವಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.