Header Ads Widget

ಯುಪಿಎಂಸಿ - ವಾಣಿಜ್ಯ ಸಂಘ~ಕೆನರಾ ಬ್ಯಾಂಕ್ ವಿದ್ಯಾರ್ಥಿ ಯೋಜನೆಗಳ ಮಾಹಿತಿ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ 19 ರಂದು  ಉನ್ನತ ಶಿಕ್ಷಣಕ್ಕಾಗಿ ಎದುರು ನೋಡುತ್ತಿರುವ    ಅಂತಿ ಮ ಪದವಿ ವಿದ್ಯಾರ್ಥಿಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ನ ವಿವಿಧ ಯೋಜ ನೆಗಳ ಮತ್ತು ಝೀರೋ ಬ್ಯಾಲನ್ಸ್ ಅಕೌಂಟ್ ನ ಕುರಿತಾದ ಮಾಹಿತಿ ಕಾರ್ಯಕ್ರಮ ಜರಗಿತು.

ಉಡುಪಿ ಕೆನರಾ ಬ್ಯಾಂಕ್ ನ ಶಾಖೆಯ ಹಿರಿಯ ಪ್ರಬಂಧಕ ಶ್ರೀ ಕಿರಣ್ ಏನ್. ಜಿ ಮಾತನಾಡಿ ಮುಂಬರುವ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಮತ್ತು ಸಂದರ್ಶನ ಎದುರಿಸುವ ಕೌಶಲಗಳ ಬಗೆಗೆ ವಿವರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.

ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕ ದುರ್ಗಾ ಪ್ರಸಾದ್ ಕೆ. ಪಿ , ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು.

ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಕಾರ್ಯಕ್ರಮ ಸಂಯೋಜಿಸಿದರು.

ತೃತೀಯ ಬಿಬಿಎ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.