Header Ads Widget

ನಿಸ್ವಾರ್ಥತನದ ಮೇರು ವ್ಯಕ್ತಿ ಈಶ್ವರ್ ಮಲ್ಪೆ~ ರಮ್ಯಾರಾಕೇಶ್ ಮಲ್ಪೆ

 

ನೋವಿನ ಪರದೆಯೊಳಗೆ, ನಗುವಿನ ಮುಖವಾಡ ಧರಿಸಿ, ನೊಂದವರ ಕರೆಗೆ ಓಗೊಟ್ಟು ಜನ ಸೇವೆ ಮಾಡುವಂತಹ ಜನ ನಾಯಕ ಈ ಈಶ್ವರ್ ಮಲ್ಪೆ. ಸಾಧನೆ ಎಂಬುವುದು ಒಂದು ತರಹದ ವೃತ್ತಿ.. ಅದನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡುವುದೇ ಸೇವೆ..

ಸಾಧನೆಗೆ ಬೇಕಾಗಿಲ್ಲ ಅಂತಸ್ತು, ವಿದ್ಯೆ,.. ಪ್ರಾಮಾಣಿಕತೆ, ಧೈರ್ಯ, ಸೇವೆ ಮಾಡುವ ಹಂಬಲ ಇವೆಲ್ಲವು ಇದ್ದಲ್ಲಿ..ಮಾಡುವ ಕಾರ್ಯದಲ್ಲಿ ಯಶಸ್ಸು ಶತಸಿದ್ಧ.. ಈಶ್ವರ್ ಮಲ್ಪೆ. ಹೆಸರಲ್ಲೇ ಇರುವಂತೆ, ಇವರು ಮಲ್ಪೆ ಕಡಲತೀರದಲ್ಲಿ  ಕಡಲಮ್ಮನ ಮಡಿಲಲ್ಲಿ ಹುಟ್ಟಿ ಬೆಳೆದಂತ ಒಬ್ಬ ಸಾಮಾನ್ಯ ವ್ಯಕ್ತಿ..
 
ಸಣ್ಣ ವಯಸ್ಸಿನಲ್ಲಿಯೇ ದೇಶಸೇವೆ ಮಾಡಬೇಕೆಂಬ ತುಡಿತ ಅದಾಗಲೇ ಮನಸ್ಸಲ್ಲಿ ಬಲ ವಾಗಿ ಬೇರೂರಿತ್ತು... ಆದರೆ ಕೆಲವೊಂದು ಕಾರಣಗಳಿಂದ ಅದು ನೆರವೇರಲಿಲ್ಲ. ಮನೆ ಯಲ್ಲಿ ಬಡತನವಿದ್ದರೂ ಅದನ್ನೆಲ್ಲ ಪಕ್ಕಕ್ಕೆ ಸರಿಸಿ ಸಮಾಜ ಸೇವೆಯತ್ತ ಹೆಜ್ಜೆ ಹಾಕಿದ ಒಬ್ಬ ಜನ ಸೇವಕ. ಇವರ ವೃತ್ತಿ ಮೀನುಗಾರಿಕೆಯಾದರೂ, ತನ್ನ ಮೊದಲ ಆದ್ಯತೆ ಸೇವೆಗೆಂದೇ ಸೀಮಿತವಾಗಿರಿಸಿದ್ದಾರೆ..

ಇವರ ಕೌಟುಂಬಿಕ ವಿಚಾರಕ್ಕೆ ಬರುವುದಾದರೆ ಇವರಿಗೆ ಮೂವರು ಮಕ್ಕಳು.. ಎರಡು ಗಂಡು, ಒಂದು ಹೆಣ್ಣುಮಗು.. ನೋವುಣಿಸುವ ವಿಚಾರವೆಂದರೆ ಆ ಮೂವರು ಮಕ್ಕಳು ಅಂಗವೈಕಲ್ಯತೆಯುಳ್ಳ ಮಕ್ಕಳಾಗಿದ್ದಾರೆ..ಇಂತಹ ಸಂದರ್ಭದಲ್ಲೂ ಇವರ ಪತ್ನಿ ಇವರ ಪ್ರತಿಯೊಂದು ಸೇವೆಗೂ ಸಂಪೂರ್ಣ ಸಹಕಾರ ನೀಡಿ ಅವರ ಸಾಧನೆಗೆ ಕನ್ನಡಿಯಾಗಿ ದ್ದಾರೆ..

ಒಬ್ಬ ವ್ಯಕ್ತಿ ತನ್ನೊಳಗೆ ಇಷ್ಟೆಲ್ಲಾ ನೋವುಗಳನ್ನು ಇರಿಸಿಕೊಂಡು ಇನ್ನೊಬ್ಬರ ನೆರವಿಗೆ ಹಗಲು ರಾತ್ರಿ ದುಡಿಯುಲು ಹೇಗೆ ತಾನೇ ಸಾಧ್ಯ? ಈ ಪ್ರಶ್ನೆಗೆ ಉತ್ತರ ಒಂದೇ..  ಆ ವ್ಯಕ್ತಿ ಯಲ್ಲಿರುವ "ನಿಸ್ವಾರ್ಥತನ"..

ಸಮಾಜ ಸೇವೆ ಮಾಡುವುದು ಎಂದರೆ ಸಾಮಾನ್ಯವಾದ ವಿಚಾರವೇನಲ್ಲ.. ನೀರುಪಾಲಾಗಿ
ರುವ ಅದೆಷ್ಟೋ ಜೀವಗಳನ್ನು ರಕ್ಷಣೆ ಮಾಡುವುದರಲ್ಲಿ ಈಶ್ವರ್ ಮಲ್ಪೆ ಯಶಸ್ವಿಯಾಗಿ
ದ್ದಾರೆ.. ತನ್ನ ಜೀವದ ಹಂಗು ತೊರೆದು 50 ಅಡಿ ಆಳದಲ್ಲೂ ಮುಳುಗಿರುವ ಮೃತ ದೇಹವನ್ನು ಹುಡುಕಿ ಸಂಬಂಧಪಟ್ಟವರಿಗೆ ತಲುಪಿಸುವಲ್ಲಿ ತನ್ನ ಕೀರ್ತಿಯನ್ನು ಮೆರೆ ದಿದ್ದಾರೆ..

ಯಾರಿಂದಲೂ ಏನನ್ನು ಬಯಸದೆ, ಯಾರು ಯಾವಾಗ ಕರೆದರೂ ಒಂದು ಕ್ಷಣವೂ ಯೋಚಿಸದೆ, ತನ್ನ ಕರ್ತವ್ಯವನ್ನು ಸ್ವಚ್ಛ ಮನಸ್ಸಿನಿಂದ ಮಾಡುವ ಒಬ್ಬ ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿ. ತನ್ನ ಮೊದಲ ಮಗನ ನೆನಪಿಗಾಗಿ ಉಚಿತ ತುರ್ತುಚಿಕಿತ್ಸೆಯನ್ನು  ಜನರ ಸೇವೆಗಾಗಿ ಕಾಯ್ದಿರಿಸಿದ್ದಾರೆ..

ಇಂತಹ ಒಬ್ಬ ಮಹಾನ್ ವ್ಯಕ್ತಿಯ ನಡುವೆ ನಾವಿದ್ದೇವೆ ಎಂದರೆ ಅದು ಹೆಮ್ಮೆಯೇ ಸರಿ..ಇಂತವರಿಂದ ನಾವು ಕಲಿಯ ಬೇಕಾಗಿರುವುದು ಬಹಳಷ್ಟಿದೆ.. "ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ "ಎಂಬ ನುಡಿಯನ್ನು ಬಹುಷಃ ಇಂತಹ ಸಾಧಕರನ್ನು ಕಂಡು ಹೇಳಿರಬೇಕು..

ತನ್ನ ಸ್ವಾರ್ಥವಿಲ್ಲದ ಸೇವೆಯಿಂದ ಅದೆಷ್ಟೋ ಜನರ ಮನಸ್ಸನ್ನು ಈಗಾಗಲೇ ಈಶ್ವರ್ ಮಲ್ಪೆಯವರು ಗೆದ್ದಿದ್ದಾರೆ.. ಹಾಗೆಯೇ ಸಾಕಷ್ಟು ಪ್ರಶಸ್ತಿಗಳ ಒಡೆಯರೂ ಆಗಿದ್ದರೆ" ಸಾಧಕರಿಗೆ ಸಾಧನೆಯ ಅಹಂ ಇರುವುದೇ" ಖಂಡಿತ ಇಲ್ಲ..

ಇಂದು ನಾವಿರುವ ಸಮಾಜದಲ್ಲಿ ಮಾನವೀಯತೆ ಎಂಬ ಪದ ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ.. ಇಂತಹ ಒಂದು ಸಮಾಜದ ನಡುವೆ ಯಾವ ಅಪೇಕ್ಷೆಯು ಇಲ್ಲದೆ ನಿಷ್ಠೆಯಿಂದ ಕೆಲಸ ಮಾಡುವಂತಹ ವ್ಯಕ್ತಿ ಎಂದರೆ ಈಶ್ವರ್ ಮಲ್ಪೆ..

ಈಶ್ವರ್ ಮಲ್ಪೆ ಕರಾವಳಿಯಲ್ಲಿ ಕಂಡಂತಹ ಒಬ್ಬ ಅದ್ಬುತ ವ್ಯಕ್ತಿ..ಇನ್ನೊಬ್ಬರ ನೋವಿಗೆ ಹೆಗಲು ಕೊಡುವಂತಹ ಸಂಜೀವಿನಿ ಎಂದರೂ ಸುಳ್ಳಗಲಾರದು.. ಭಗವಂತ ಇನ್ನಷ್ಟು ಮತ್ತಷ್ಟು ಸೇವೆಯನ್ನು ಮಾಡುವಂತಹ ಬಾಗ್ಯವನ್ನು ಅವರಿಗೆ ನೀಡಲಿ..

ಅಷ್ಟೇ ಅಲ್ಲದೆ ನಾವು ನಮ್ಮಲ್ಲಿ ಆದಂತಹ ಸಹಕಾರವನ್ನು ಅವರಿಗೆ ನೀಡಿ, ಸಾಧ್ಯವಾದಷ್ಟು ಅವರು ಮಾಡುವ  ಜನಸೇವೆಯಲ್ಲಿ ಪಾಲ್ಗೊಂಡು ಈ ಮಣ್ಣಿನ ಋಣ ತೀರಿಸುವ ಕಾರ್ಯ ವನ್ನು ಮಾಡೋಣ..

                              ರಮ್ಯಾರಾಕೇಶ್ ಮಲ್ಪೆ