ಉಡುಪಿ ದೊಡ್ಡನ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ 18ನೇ ವರ್ಷದ ಶರಣವ ರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರುತೀದೆ..
ದಿನ ಪ್ರತಿ ಜೋಡಿ ಚಂಡಿಕಾಯಾಗ ದುರ್ಗಾ ನಮಸ್ಕಾರ ಪೂಜೆ ವಿಜಯದಶಮಿಯ ಪರ್ವ ಕಾಲದಲ್ಲಿ ತ್ರಿಲೋಕೇಶ್ವರಿ ಮಹಾಯಾಗ ಬಲಿ ಉತ್ಸವ ರಂಗ ಪೂಜಾ ಮಹೋತ್ಸವ ನಿರಂ ತರ ಮೃಷ್ಟಾನ್ನ ಸಂತರ್ಪಣೆ ಸಾಂಸ್ಕೃತಿಕ ವೈಭವ ಹೀಗೆ ಹತ್ತು ಹಲವು ಕಾರ್ಯಕ್ರಮ ಗಳೊಂದಿಗೆ ಕ್ಷೇತ್ರ ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಭೂತವಾಗಿದೆ..
ಬರಡು ಭೂಮಿಯಾಗಿದ್ದ ತಾಣ ರಮಾನಂದ ಗುರೂಜಿಯವರಿಗೆ ಆಧ್ಯಾತ್ಮಿಕ ಕಂಪನವನ್ನು ಗೋಚರಿಸಿ ಭೂಗತ ಶಕ್ತಿ ಕ್ಷೇತ್ರವನ್ನು ಪುನ ಶ್ಚೇತನವನ್ನಾಗಿಸಿ ಈಗ ಪುಣ್ಯಭೂಮಿಯಾಗಿ ಪ್ರಧಾನ ಶಕ್ತಿಯಾದ ಶ್ರೀ ದುರ್ಗಾ ಆದಿಶಕ್ತಿ ದೇವಿ ತನ್ನ ಕಾರಣಿಕದ ಅಸ್ತಿತ್ವದಿಂದ ಬೇಡಿ ಬಂದ ಭಕ್ತರ ಇಷ್ಟಾರ್ಥವನ್ನು ಕರುಣಿಸಿ ಭಕ್ತರ ಮನೆ ಮನ ಬೆಳಗುತ್ತಿದ್ದಾಳೆ.
ಅಂತಹ ಕಾರಣಿಕ ಮೆರವ ಮಾತೆಯ ದರುಶ ನಕ್ಕೆ ಪ್ರಾತಃಕಾಲದಿಂದಲೇ ಕ್ಷೇತ್ರದಲ್ಲಿ ಭಕ್ತ ಗಡಣ ಹರಿದು ಬರುತ್ತಿದೆ.. ದಿನಪ್ರತಿ 5 ಸಹಸ್ರ ಕ್ಕೂ ಮಿಕ್ಕಿದ ಭಕ್ತರುಗಳು ಕ್ಷೇತ್ರ ಸಂದರ್ಶಿಸಿ ದರೆ 3000ಕ್ಕೂ ಮಿಕ್ಕಿದ ಭಕ್ತರುಗಳು ಮೃಷ್ಟಾನ್ನ ಸಂತರ್ಪಣೆ ಸ್ವೀಕರಿಸುತ್ತಿದ್ದಾರೆ..
ಅಚ್ಚುಕಟ್ಟಾದ ವ್ಯವಸ್ಥೆ :ಕ್ಷೇತ್ರದಲ್ಲಿ ಪ್ರತಿ ಯೊಂದು ಕಾರ್ಯವು ಕೂಡ ಅಚ್ಚುಕಟ್ಟಾಗಿ ನೆರವೇರುತ್ತಿದೆ.. ಕ್ಷೇತ್ರದಲ್ಲಿ ಸೇವಾದಿಗಳಿಗೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ನೃತ್ಯ ಸೇವಾರ್ಥಿಗಳಿಗೆ ವಿಶೇಷ ಮಾನ್ಯತೆ ದೊರ ಕುತ್ತಿದೆ.. ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದ ಏಕಕಾಲದಲ್ಲಿ ಒಂದು ಸಹಸ್ರಕ್ಕೂ ಮಿಕ್ಕಿದ ಭಕ್ತರುಗಳಿಗೆ ತುದಿ ಬಾಳೆ ಎಲೆಯಲ್ಲಿ ಬಡಿಸಿ ಉಣಿ ಸಲಾಗುತ್ತಿದೆ..
ಕ್ಷೇತ್ರದ ಅನ್ನಪೂರ್ಣ ಭೋಜನಾಲಯ ಆದಿಶಕ್ತಿ ಸಭಾಭವನ ಸರಸ್ವತಿ ಭವನ ಹೀಗೆ ಏಕಕಾಲದಲ್ಲಿ ಅನ್ನಪ್ರಸಾದ ವಿತರಣೆ ಯಾಗುತ್ತದೆ.. ಭಕ್ತರೂ ಕೂಡ ಅಷ್ಟೇ ಭಕ್ತಿ ಯಿಂದ ಅನ್ನಪ್ರಸಾದ ಸ್ವೀಕರಿಸಿ ದಿವ್ಯ ಅನು ಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.. ದೂರದ ಊರಿನಿಂದ ಅಸಂಖ್ಯಾತ ಭಕ್ತರು ಕಾರಣಿಕ ಮೆರೆವ ಮಾತೆಯ ದರ್ಶನಕ್ಕೆ ಹಾತೊರೆದು ಬರುತ್ತಿದ್ದಾರೆ..
ಮಧ್ಯಾಹ್ನದ ವಿಶೇಷವಾಗಿ ದೇವಿಯನ್ನು ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗುತ್ತದೆ ಬೆಳಗ್ಗಿನಿಂದ ರಾತ್ರಿಯವರೆಗೂ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಲೇ ಇರುತ್ತಾರೆ..
ಕಾರಣಿಕ ಮೆರೆವ ತಾಯಿ ಭಕ್ತರನ್ನು ಚುಂಬ ಕದಂತೆ ಕ್ಷೇತ್ರಕ್ಕೆ ಸೆಳೆದು ತರುತ್ತಿದ್ದಾಳೆ ಎನ್ನುತ್ತಾರೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್