Header Ads Widget

ಛಾಯಾಗ್ರಾಹಕರ ಸೌಹಾರ್ದ ಭೇಟಿ

ನಾಡಿನ ಹೆಮ್ಮೆಯ ಹಿರಿಯ ಛಾಯಾಗ್ರಾಹಾಕರಾದ ಜ್ಯೂಪಿಟರ್ ಮಂಜು ಅವರನ್ನು KSVPV ಅಸೋಸಿಯೇಷನ್ ಪದಾಧಿಕಾರಿಗಳು ಅವರ ಮನೆ (ಸ್ಟುಡಿಯೋ) ದಲ್ಲಿ ಭೇಟಿ ಮಾಡಿದಾಗ ಆದರದಿಂದ ಪ್ರೀತಿಯಿಂದ ಎಲ್ಲರನ್ನು ಸ್ವಾಗತಿಸಿದರು. ಎಲ್ಲರ ಪರಿಚಯದೊಂದಿಗೆ ಆರಂಭವಾದ ಮಾತು ಕಥೆ ನಮ್ಮ ಸಂಘಟನೆ ಬಗ್ಗೆ ಪರಿಚಯ ಮಾಡಿಕೊಂಡು ಸದಸ್ಯರಾಗಿ ಸಂಘಟನೆ ಬೆಳೆಯಲು, ಬೆಳೆಸಲು ತಮ್ಮ ಸಹಕಾರ ಸಲಹೆ ಪ್ರೋತ್ಸಾಹ ನೀಡುವಂತೆ ಕೋರಲಾಯಿತು. ನಮ್ಮ ಮಾತನ್ನು ಪುರಸ್ಕರಿಸಿ ಸದಸ್ಯರಾಗುವ ಮೂಲಕ ಸಂಪೂರ್ಣ ಸಹಕಾರ ನೀಡುವುದಾಗಿ ಬಿಚ್ಚು ಮನಸ್ಸಿನಿಂದ ತಿಳಿಸಿದರು. ಜ್ಯುಪಿಟರ್ ಮಂಜು ಅವರು ನಮ್ಮೆಲ್ಲರೊಂದಿಗೆ ಸಂಘಟನೆ ಹಾಗೂ ವೃತ್ತಿಗೆ ಸಂಬಂಧ ಪಟ್ಟ ಅನೇಕ ಹಳೆಯ ನೆನಪು ಹಾಗೂ ಹೊಸ ವಿಷಯಗಳನ್ನು ಪ್ರೀತಿಯಿಂದ ನಮ್ಮೊಂದಿಗೆ ಸುಮಾರು 4 ಗಂಟೆಗಳ ಕಾಲ ಮಾತಾಡಿದರು. ಅವರಿಗೆ ನಮ್ಮ ಸಂಘಟನೆ ಪರವಾಗಿ ಗೌರವದೊಂದಿಗೆ ಧನ್ಯವಾದ ಹೇಳಲಾಯಿತು. ಈ ಸಂದರ್ಭದಲ್ಲಿ ರಮೇಶ್ B K ಅಧ್ಯಕ್ಷರು ಉಪಾಧ್ಯಕ್ಷ ರಘು ಎಸ್ ಕಾರ್ಯದರ್ಶಿ ಸುಧೀರ್ ಹೆಬ್ಬಾರ್ ಖಜಾಂಚಿ ಪ್ರದೀಪ್ ನಿರ್ದೇಶಕರಾದ ಕಾಶಿ ಸುಬ್ರಮಣ್ಯಂ ಹಾಗೂ ಚಂದ್ರಶೇಖರ್ ಹಾಜರಿದ್ದರು.