ಬೆಂಗಳೂರಿನ ಬಸವನಗುಡಿಯಲ್ಲಿ ಅಕ್ಟೋಬರ್ 9 ,10 ರಂದು ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವಿ ಒನ್ ಅಕ್ವಾ ಸೆಂಟರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಸ್ವಿಮ್ಮಿಂಗ್ ಕ್ಲಬ್ ನಲ್ಲಿ ತರಬೇತಿ ಪಡೆದ ಪ್ರಹ್ಲಾದ್ ಶೆಟ್ಟಿ, ಇವನು 50 ಮೀಟರ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಗಳಲ್ಲಿ ವಿಜೇತನಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ತರಬೇತುದಾರರಾಗಿ ಲೋಕರಾಜ್ ವಿಟ್ಲ, ಸ್ಕಂದ ಕುಮಾರ್, ಸ್ಯಾಂಜೊ ಕೆಪಿ. ಸಹಕರಿಸಿದ್ದರು. ಈತ ಚಂದ್ರು ಎಂ. ಹಾಗು ಪ್ರೇಮ ಎಂ. ದಂಪತಿಗಳ ಪುತ್ರ. ಕುಂಜಿಬೆಟ್ಟಿನ ಟಿ.ಎ.ಪೈ ಇ.ಎಂ.ಎಚ್ .ಎಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ