Header Ads Widget

ಸ್ವಚ್ಛತೆಯ ಕಡೆಗೆ ನಮ್ಮಯ ನಡಿಗೆ~ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ,


ಭಾರತ್ ಸ್ಕೌಟ್ಸ್  ಅಂಡ್ ಗೈಡ್ಸ್  ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ದಿನಾಂಕ 02/10/24 ರಂದು   ಜಿಲ್ಲಾ ಮುಖ್ಯ ಆಯುಕ್ತರಾದ ಜಯ ಕರ್ ಶೆಟ್ಟಿ ಇವರ ನೇತೃತ್ವದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸಭೆ ಹಾಗೂ ಇತರ ಸಂಘ ಸಂಸ್ಥೆಯೊಂದಿಗೆ  ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ  ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ  ಸ್ವಚ್ಛತಾ ಕಾರ್ಯ ಕ್ರಮ, ಹಾಗೂ ಸುಮಾರು 2,500 ಮಂದಿ ಸೇರಿಕೊಂಡು (ಸ್ವಚ್ಛತೆಯ ಕಡೆಗೆ ನಮ್ಮ ಯ ನಡಿಗೆ) ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿ ಸುವ  ಬೃಹತ್ ಜಾಥಾನಡೆಸ ಲಾಯಿತು. 

ಉಡುಪಿ  ಟೌನ್ ಹಾಲ್  ನಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಗಾಂಧಿ ಜಯಂತಿ ಯನ್ನು ಬಹಳ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ದಾಖಲೆಯಾಗುವ ರೀತಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ  ಮುಖ್ಯ ಆಯುಕ್ತರ  ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. 

 ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಯವರಾದ ಡಾ. ವಿದ್ಯಾಕುಮಾರಿ, ಜಿಲ್ಲಾ ಮುಖ್ಯ ಆಯುಕ್ತರು ಇಂದ್ರಾಳಿ  ಜಯಕರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ ಮಮತಾ ದೇವಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರತೀಕ್ ಬಾಯಾಲ್, ಪೊಲೀಸ್ ಅಧಿಕ್ಷಕ ಡಾ। ಅರುಣ್ ಕೆ, ಹೆಚ್ಚುವರಿ ಪೋಲಿಸ್ ಅಧಿಕ್ಷಕ ಎಸ್ ಟಿ ಸಿದ್ದಲಿಂಗಪ್ಪ, ರಾಯಪ್ಪ, ಪೌರಾಯುಕ್ತ, ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಹಾಗೂ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು  ಉಪಸ್ಥಿತರಿದ್ದರು.