ಮಲ್ಪೆಯ ವಿಘ್ನೇಶ್ವರ ಪ್ರಿಂಟಿಂಗ್ ಪ್ರೆಸ್ ಮಾಲಕ ಗೋಳಿದಡಿ ಮಲ್ಪೆ ಮಹೇಶ್ ಕುಮಾರ್ ಅವರ ಸಾರಥ್ಯದಲ್ಲಿ ನೂತನವಾಗಿ ಪ್ರಾರಂಭಗೊಂಡ "ಶ್ರಮಿಕ ರತ್ನ" ಪಾಕ್ಷಿಕ ಪತ್ರಿಕೆಯೊಂದಿಗೆ ಸಂಪಾದಕ ಮಹೇಶ್ ತಮ್ಮ ಪ್ರತಿಕಾ ಬಳಗದವರೊಂದಿಗೆ ಶಿವಪುರದ ಪಾಂಡುಕಲ್ಲುವಿನಲ್ಲಿರುವ ಖ್ಯಾತ ಹರಿದಾಸ, ಸಾಮಾಜಿಕ ಚಿಂತಕ ಬಿ.ಸಿ.ರಾವ್ ಶಿವಪುರ ಇವರ ಮನೆಗೆ ತೆರಳಿ ಶುಭಾಶಯ ಕೋರಿದರು.
ವಯೋವೃದ್ಧರು, ಜ್ಞಾನ ವೃದ್ದರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಮಲ್ಪೆ ಶ್ರೀ ರಾಘವೇಂದ್ರ ಅವರು ಪತ್ರಿಕೆ ಯ ಪರವಾಗಿ ಬಿ.ಸಿ.ರಾವ್ ಮತ್ತು ಅವರ ಪತ್ನಿ ಅಹಲ್ಯಾ ರಾವ್ ರವರಿಗೆ ಗೌರವ ಅರ್ಪಿಸಿ ಸನ್ಮಾ ನಿಸಿದರು.
ಈ ಸಂದಭದಲ್ಲಿ ರಾವ್, ಮಾತಾನಾಡಿ ಪತ್ರಿಕೆ ನಿರಂತರವಾಗಿ ನಡೆದು ಬಂದು ಜನ ಮನವನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದರು. ಪತ್ರಿಕೆಯ ಗೌರವ ಸಂಪಾದಕ ಚೆಲುವೆ ರಾಜ್ ಪೆರಂಪಳ್ಳಿ ಮತ್ತಿತರರು ಹಾಜರಿದ್ದರು. ಸಂಪಾದಕ ಮಹೇಶ್ ಕೃತಜ್ಞತೆ ಧನ್ಯವಾದವಿತ್ತರು