Header Ads Widget

ಪುತ್ತೂರು ಬ್ರಾಹ್ಮಣ ಮಹಾಸಭಾ : 12ನೇ ವರ್ಷದ ತುಳಸಿ ಸಂಕೀರ್ತನೆ ಸೇವೆ

ಪುತ್ತೂರು ಬ್ರಾಹ್ಮಣ ಮಹಾಸಭಾ ತುಳಸಿ ಸಂಕೀರ್ತನೆ ಬಳಗದ 12ನೇ ವರ್ಷದ ತುಳಸಿ ಸಂಕೀರ್ತನೆ ಸೇವೆಯನ್ನು ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರಿ ದೇವರ ಸನ್ನಿಧಾನದಲ್ಲಿ ದೇವಳದ ಆಡಳಿತ ಮೊಕ್ತೇಸರರೂ ಅನುವಂಶಿಕ ಅರ್ಚಕರೂ ಆದ ಶ್ರೀ ಕೃಷ್ಣಮೂರ್ತಿ ಭಟ್ ಪುತ್ತೂರು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೆ ಶುಭಾ ಬಾಳ್ತಿಲ್ಲಾಯ, ಜೊತೆ ಕಾರ್ಯದರ್ಶಿ ರಾಮದಾಸ ಉಡುಪ, ತುಳಸಿ ಸಂಕೀರ್ತನೆ ತಂಡದ ಸಂಚಾಲಕ ಚೈತನ್ಯ ಎಂ.ಜಿ., ಸಹ ಸಂಚಾಲಕ ಶ್ರೀಶ ಭಟ್ ಅಂಬಾಗಿಲು, ಆಪತ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ ಮತ್ತು ಸಂಕೀರ್ತನ ತಂಡದ ಸರ್ವಸದಸ್ಯರು ಉಪಸ್ಥಿತರಿದ್ದರು. ಕಾರ್ತಿಕ ಮಾಸಾದ್ಯಂತ ಮಹಾಸಭಾದ ಸದಸ್ಯರ ಮನೆಗಳಲ್ಲಿ ಮತ್ತು ಪರಿಸರದ ದೇವಾಲಯಗಳ ದೀಪೋತ್ಸವ ಸಂದರ್ಭದಲ್ಲಿ ಸಂಕೀರ್ತನ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕರಾದ ಚೈತನ್ಯ ಎಂ.ಜಿ. ಮಾಹಿತಿ ನೀಡಿದರು.