ಜಿಲ್ಲಾ ಶ್ರೀಕನಕದಾಸ ಸಮಾಜ ಸೇವಾ ಸಂಘದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿಸೋಮವಾರಜರಗಿದ 537ನೇ ಶ್ರೀಕನಕದಾಸ ಜಯಂತಿ ಮಹೋತ್ಸವದ ಸಮಾರಂಭ ದಲ್ಲಿ ಅವರು ಆಶೀರ್ವಚನ ನೀಡಿದರು.
ಈ ಸಂದರ್ಭ ವಿದ್ವಾನ್ ಡಾ। ಬಿ. ಗೋಪಾಲ ಆಚಾರ್ಯರಿಗೆ ಭಕ್ತ ಕನಕ ಪುರಸ್ಕಾರ ನೀಡಿ ಗೌರವಿಸ ಲಾಯಿತು. ಹಾಲಮತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸ ಲಾಯಿತು. ಸಮಾಜದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪರ್ಯಾಯ ಪುತ್ತಿಗೆ ಮಠದಕಿರಿಯ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು ಶುಭ ಹಾರೈಸಿದರು.
ಬೆಂಗಳೂರು ರಾಜ್ಯಾಧ್ಯಕ್ಷ ಓಂ. ಕೃಷ್ಣಮೂರ್ತಿ, ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ರಾಜ್ಯ ಸಹ ಕಾರ್ಯದರ್ಶಿ ಬಸವರಾಜ ಕುರುಬರ, ಶ್ರೀಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಭಾರತ್ ಸ್ಕೌಟ್ ಜಿಲ್ಲಾ ಆಯುಕ್ತ ಜನಾರ್ದನ ಕೊಡವೂರು, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಶ್ರೀಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸಿದ್ದರಾಜು ಕೆ.ಎಸ್., ಮಾಜಿ ಸೈನಿಕ ವಗನೇಪ್ಪ ಯಳಮೇಲಿ, ಪ್ರವೀಣ ಯಮನಪ್ಪ ಬೆನಕನವಾರಿ, ಪ್ರಮುಖರಾದ ಹನುಮಂತ, ಆಡಿನ್, ಸಂಗಮೇಶ ಬ. ಆಸಂಗಿ, ದೇವು ಎಸ್. ಪೂಜಾರಿ, ಆಸಂಗಿ ಕುಚಲ್, ಸಿದ್ದಪ್ಪ ಅಕ್ರಗಲ್, ಯಲ್ಲಪ್ ಎಚ್. ಆಸಂಗಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.