ಉಡುಪಿ ಜಿಲ್ಲೆಯ ಗೌರವಾನ್ವಿತ ಪ್ರತಿಷ್ಠಿತ ಸಂಘ ಸಂಸ್ಥೆಗಳಾದ ರೋಟರಿ ಕ್ಲಬ್ ಕಲ್ಯಾಣಪುರ, ಲಯನ್ಸ್ ಅಂಡ್ ಲಿಯೋ ಕ್ಲಬ್ ಅಮೃತ್ ಉಡುಪಿ, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಜಂಟಿ ಆಶ್ರಯದಲ್ಲಿ ಕೇಂದ್ರ ಸರಕಾರದ ಯೋಜನೆಯನ್ನು ಶ್ರವಣದೋಷ ಇರುವ ದಿವ್ಯಾಂಗರಿಗೆ ತಲುಪಿಸುವ ದೃಷ್ಟಿಯಲ್ಲಿ ಒಟ್ಟು 300 ಜನ ದಿವ್ಯಾಂಗರನ್ನು ಸೇರಿಸಿಕೊಂಡು ಅವರಿಗೆ ಬೇಕಾದ ಉತ್ತಮ ಮಟ್ಟದ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮವನ್ನು ದಿನಾಂಕ 28. 11.2024 ನೇ ಗುರುವಾರದಂದು ಅಮೃತ್ ಗಾರ್ಡನ್, ಅಂಬಾಗಿಲು ಇಲ್ಲಿ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾದ ಕೆ ವಿಜಯ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕೊಡವೂರುರವರು ಉಡುಪಿ ಜಿಲ್ಲೆಯಲ್ಲಿ ಒಟ್ಟು ಹದಿನೈದು ಸಾವಿರಕ್ಕಿಂತಲೂ ಹೆಚ್ಚು ದಿವ್ಯಾಂಗರು ಜಿಲ್ಲೆಯಲ್ಲಿದ್ದು, ಅದರಲ್ಲಿ ಹೆಚ್ಚು ಶ್ರವಣದೋಷ ಉಳ್ಳಂತಹ ದಿವ್ಯಾಂಗರು ಉಡುಪಿ ಜಿಲ್ಲೆಯಲ್ಲಿದ್ದು ಇದನ್ನು ಮನಗೊಂಡಂತಹ ಗೌರವಾನ್ವಿತ ಸಂಘ ಸಂಸ್ಥೆಗಳು ಇದಕ್ಕೆ ತಮ್ಮ ಸಹಕಾರ ನೀಡಬೇಕು ಮತ್ತು ಉಡುಪಿ ಜಿಲ್ಲೆಯನ್ನು ಶ್ರವಣ ದೋಷ ಮುಕ್ತ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವನ್ನು ಇಡಲಾಗಿದೆ. ಆದ್ದರಿಂದ ಉಡುಪಿ ಜಿಲ್ಲೆಯ ಎಲ್ಲಾ ನಾಗರಿಕರಲ್ಲಿ ವಿನಂತಿಸುವುದೇನೆಂದರೆ ತಮ್ಮ ಮನೆಯ ಆಸುಪಾಸಿನಲ್ಲಿ ಅಥವಾ ಪರಿಚಯದವರು ಯಾರಾದರೂ ಇದ್ದರೆ ತಾವು ಅದನ್ನು ಗುರುತಿಸಿ ಈ ಕೆಳಗೆ ನೀಡಿರುವ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ. ವಿಶೇಷ ಸೂಚನೆ ಮೊದಲು ಬಂದ 300 ದಿವ್ಯಾಂಗರಿಗೆ ಶಿಬಿರದಲ್ಲಿಯೇ ವೈದ್ಯರು ತಪಾಸನೆ ನಡೆಸಿ ಶ್ರವಣ ಯಂತ್ರ ವಿತರಿಸುವ ಕಾರ್ಯಕ್ರಮವು 28ನೇ ತಾರೀಕು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಳ್ಳುತ್ತದೆ.
ಫಲಾನುಭವಿಗಳು ಶಿಬಿರಕ್ಕೆ ಬರುವಾಗ ತರಬೇಕಾದ ದಾಖಲಾತಿಗಳು :
1) ಇತ್ತೀಚಿನ ಭಾವಚಿತ್ರ ಮೂರು ಪ್ರತಿ
2) ಆಧಾರ್ ಕಾರ್ಡ್ ಒರಿಜಿನಲ್ ಮತ್ತು ಪ್ರತಿ ಮೂರು
3) ಬಿಪಿಎಲ್ ಕಾರ್ಡಿನ ಒರಿಜಿನಲ್ ಮತ್ತು ಪ್ರತಿ ಮೂರು
ಸಂಪರ್ಕ ಸಂಖ್ಯೆ: 7892962815