ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಪಂಚಾಯತ್ ರಾಜ್ ಸಚಿವಾಲಯ ಭಾರತ ಸರ್ಕಾರ ಮತ್ತು ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ನವದೆಹಲಿ ಸಹಯೋಗದಲ್ಲಿ ಅರ್ಪಿಸುತ್ತಿದೆ ಜನರೆಡೆಗೆ ಜ್ಞಾನವಾಹಿನಿ ಸರಣಿ ಕಾರ್ಯಕ್ರಮ. ಈ ಸರಣಿಯ 7ನೇ ಸಂಚಿಕೆಯಲ್ಲಿ ಜಲಸಮೃದ್ಧ ಗ್ರಾಮ ಎನ್ನುವ ವಿಷಯದ ಕುರಿತು ಪ್ರಹಸನ ಪ್ರಸಾರವಾಗಲಿದೆ. ಇದು ನವೆಂಬರ್ ತಿಂಗಳ ದಿನಾಂಕ 4 ರಂದು ಸೋಮವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಸಮುದಾಯ ಬಾನುಲಿ ಸ್ವಯಂಸೇವಕರಾದ ಶೆಟ್ಟಿ ದೇವಿಪ್ರಸಾದ್ ಕೆಮ್ಮಣ್ಣು, ಸುನೀತಾ ನಂದಗೋಕುಲ, ಸಾಧು ಹಾಂಡ ನಂದಗೋಕುಲ, ಉಮಾಸೀತಾರಾಮ್ ಬಜಗೋಳಿ, ವಸುಧಾ ಅಡಿಗ ನೀಲಾವರ, ಸುನೀತಾ ಅಂಡಾರು ಮತ್ತು ಹಕ್ಲಾಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 5 ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ.