ಸ್ತ್ರೀ...
ಸಹನೆಗೆ ಇನ್ನೊಂದು ಹೆಸರು... ಅವಳಿಂದಲೇ ಈ ಭುವಿ.. ಅವಳಿಂದಲೇ ಈ ಪ್ರಕೃತಿ...
ಪ್ರತಿ ಒಬ್ಬರ ಜೀವನದಲ್ಲೂ ಹೆಣ್ಣು ಮಗಳ ಪಾತ್ರ ಬಹು ದೊಡ್ಡದು.. ಪ್ರತಿಯೊಂದು ಪಾತ್ರಕ್ಕೂ ಅವಳು ಸಾರ್ಥಕತೆಯ ಭಾವವನ್ನು ತುಂಬುವುದರಲ್ಲಿ ಯಾವುದೇ ಸಂಶಯವಿಲ್ಲ..
ವೇದಗಳಲ್ಲಿ ಹೇಳುವ ಪ್ರಕಾರ,ನಮ್ಮ ಸಂಸ್ಕಾರ ಏನು ಹೇಳುತ್ತದೆ ಎಂದರೆ.. ಒಬ್ಬ ವ್ಯಕ್ತಿ ಸ್ತ್ರೀ ಯನ್ನು ಗೌರವದಿಂದ ಕಾಣಬೇಕು ತನ್ನ ಹೆತ್ತ ತಾಯಿಯಂತೆ..
ಪ್ರತಿಯೊಂದು ಹೆಣ್ಣು ಮಕ್ಕಳನ್ನು ಕಾಳಜಿ ವಹಿಸಬೇಕು ತನ್ನ ಮಕ್ಕಳಂತೆ..
ಆದರೆ ಇಂದು ನಮ್ಮ ಸಮಾಜ ಯಾವ ಸ್ಥಿತಿಗೆತಲುಪಿದೆ ಎಂದರೆ, ಹಸುಗೂಸಿನಿಂದ ಹಿಡಿದು ವ್ರದ್ಧೆಯರನ್ನು ಹಿಡಿದು ಹಿಂಸಿಸಿ ಅಟ್ಟಹಾಸ ಮೆರೆಯುತ್ತಿದೆ..
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ತನ್ನದೇ ಆದ ಸ್ಥಾನಮಾನ ಗೌರವ ಇದೆ, ಆದರೆ ಇಂದು ಆ ಸ್ಥಾನಕ್ಕೆ ಧಕ್ಕೆ ಬಂದಿರುವುದಂತು ಶೋಚನೀಯ..
ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಅತ್ಯಾಚಾರ, ಅಪಹರಣ ಎಂಬ ವಿಚಾರವು ಎಲ್ಲರ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿದೆ..
ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ ತನ್ನೆಲ್ಲ ಕರ್ತವ್ಯವನ್ನು ಯಾವುದೇ ಲೋಪವಿಲ್ಲದೆ ನಿರ್ವಹಿಸುವಂತ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಯಾವುದೇ ರೀತಿಯ ಭದ್ರತೆ ಇಲ್ಲದಂತಾಗಿದೆ..
ಪರಿಸರವನ್ನು ಉಳಿಸಿ, ಬೆಳೆಸಿ ಅನ್ನುವ ನಾವು, ಇನ್ನು ಮುಂದೆ ಹೆಣ್ಣುಮಕ್ಕಳನ್ನು ಉಳಿಸಿ, ರಕ್ಷಿಸಿ ಅನ್ನುವ ಧ್ಯೇಯ ವಾಕ್ಯವನ್ನು ಹೇಳುವಂತಾಗಿದೆ..
ಅಂದು ಸೀತೆಯನ್ನು ಕರೆದೊಯ್ದ ರಾವಣ ರಾಕ್ಷಸನಾಗಿದ್ದರು ಸೀತೆಯ ಪಾವಿತ್ರತೆಗೆ ಯಾವುದೇ ಕಳಂಕ ತರಲಿಲ್ಲ..ಆದರೆ ಇಂದಿನ ದಿನಗಳಲ್ಲಿ ಮನುಷ್ಯ ಎಲ್ಲಾ ಕಡೆಯಲ್ಲೂ ರಾಕ್ಷಸ ಪ್ರವೃತ್ತಿಯನ್ನು ಮೆರೆಯುತ್ತಿದ್ದಾನೆ..
ಬದುಕಿ ಬಾಳುವಂತ ಅದೆಷ್ಟೋ ಹೆಣ್ಣು ಮಕ್ಕಳು ಇಂದು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದು ಕೊಂಡಿದ್ದಾರೆ..
ಹುಟ್ಟಿದ ದಿನದಿಂದಲೇ ತಮ್ಮ ಹೆಣ್ಣುಮಕ್ಕಳ ಮೇಲೆ ನೂರಾರು ಕನಸುಗಳನ್ನು ಹೆಗಲೇರಿಸಿಕೊಂಡು ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನಮಾನ ಸಿಗಲೆಂದು ಹಗಲು ರಾತ್ರಿ ದುಡಿಯುವ ತಂದೆತಾಯಂದಿರ ಕಣ್ಣೇರು ಒರೆಸುವ ಕೈಗಳು ಇಲ್ಲದಂತಾಗಿದೆ..
ಈ ಸಮಾಜದಲ್ಲಿ ಬದುಕುವಂತಹ ಹಕ್ಕು ಪ್ರತಿಯೊಬ್ಬರಿಗೂ ಇದೆ.. ಅದನ್ನು ಕಸಿದುಕೊಳ್ಳುವ ಪ್ರಯತ್ನ ಯಾರು ಮಾಡತೀರದು..
ಹೆಣ್ಣುಮಕ್ಕಳು ಎಲ್ಲಾ ರೀತಿಯಲ್ಲೂ ಸರಿಯಾಗಿದ್ದಾರೆ ಎಂಬ ಸ್ಪಷ್ಟನೆಯನ್ನು ಇಲ್ಲಿ ನೀಡಲು ಅಸಾದ್ಯ ಏಕೆಂದರೆ ಇಂದಿನ ಹೆಣ್ಣುಮಕ್ಕಳು ನಮ್ಮ ಸಂಸ್ಕೃತಿ ನಮ್ಮ ಉಡುಗೆ ತೊಡುಗೆಯ ಕಡೆ ಸಾಕಷ್ಟು ಗಮನವನ್ನು ಕೊಡದ ಕಾರಣವೂ ಕೆಲವೊಂದು ಇಂತಹ ಅಹಿತಕರ ಘಟನೆಗಳು ನಮ್ಮ ನಡುವೆ ಸಂಭವಿಸುವ ಸಾಧ್ಯತೆಯೂ ಇದೆ..
ಹಾಗೆಯೇ ಇಂದು ಎಷ್ಟೋ ಪುರುಷರು ಹೆಣ್ಣುಮಕ್ಕಳ ಅತ್ಯಾಚಾರದ ವಿರುದ್ಧ ದ್ವನಿ ಎತ್ತಿದ್ದಾರೆ ಇನ್ನು ಹೋರಾಟ ನಡೆಸುತ್ತಲೇ ಇದ್ದಾರೆ..ಇಲ್ಲಿ ಮುಖ್ಯವಾದ ವಿಚಾರವೆಂದರೆ ಇಂದಿನ ಗಂಡು ಮಕ್ಕಳಲ್ಲಿ ಹಾಗೆ ಹೆಣ್ಣುಮಕ್ಕಳಲ್ಲಿ ಸಂಸ್ಕಾರದ ಕೊರತೆ ಹೆಚ್ಚಾಗಿರುವುದರಿಂದಲೇ ಸಮಾಜದಲ್ಲಿ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು..
ಎಲ್ಲಾ ತಂದೆ ತಾಯಂದಿರು ಇನ್ನು ಮುಂದೆ ಆದರೂ ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಂಸ್ಕಾರ ಎಂಬ ತುತ್ತನ್ನು ನೀಡುತ್ತಾ ಬಂದರೆ, ಮುಂದೆ ಸಮಾಜದಲ್ಲಿ ಎಂದಿಗೂ ಮಕ್ಕಳು ಕೆಟ್ಟ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರರು..
ಬದಲಾಗಬೇಕು ಸಮಾಜ, ಬದಲಾಗಬೇಕು ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿ... ಅವರನ್ನು ಗೌರವದಿಂದ ನಡೆಸಿಕೊಳ್ಳೋಣ.. ಅವರ ಕನಸುಗಳಿಗೆ ನೀರೆರಚದೆ, ದಾರಿ ದೀಪವಾಗೋಣ...
~ರಮ್ಯಾ ರಾಕೇಶ್