Header Ads Widget

ರಂಗಭೂಮಿ ಉಡುಪಿ 60ರ ಸಂಭ್ರಮ ಉದ್ಘಾಟನೆ

ಕುಂಜಿಬೆಟ್ಟಿನ ಟಿ.ಎ. ಪೈ ಇಂಗ್ಲೀಷ ಮೀಡಿಯಂ ಹೈಸ್ಕೂಲಿನಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ 60ರ ಸಂಭ್ರಮಾಚರಣೆಯನ್ನು ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರದೀಪ್‌ಚಂದ್ರ ಕುತ್ಪಾಡಿ ಇತ್ತೀಚೆಗೆ (06/11/2024) ದೀಪ ಬೆಳಗಿಸಿ ಉದ್ಘಾಟಿಸಿದರು. 

ಅವರು ಮಾತನಾಡುತ್ತಾ “ವಿದ್ಯಾರ್ಥಿಗಳು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.

ಸಹ ಸಂಚಾಲಕರಾದ ಶ್ರೀ ರವಿರಾಜ ನಾಯಕ್‌ ಪ್ರಸ್ತಾವನೆ ಗೈದರು. ನಾಟಕ ನಿರ್ದೇಶಕ ಶ್ರೀ ದಿವಾಕರ ಕಟೀಲು, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಜಲಾ ಸತೀಶ ಸುವರ್ಣ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದ ಶೆಟ್ಟಿಯವರು ಸ್ವಾಗತಿಸಿದರು. ವಿದ್ಯಾರ್ಥಿ ಚಿರಾಗ್‌ ವಿ. ಶೆಟ್ಟಿ ವಂದನಾರ್ಪಣೆಗೈದರು. ಕುಮಾರಿ ಅಮೃತವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೂಪಶ್ರೀ ಕಾರ್ಯಕ್ರಮವನ್ನು ಸಂಘಟಿಸಿದರು.