Header Ads Widget

ಮಠ ಖ್ಯಾತಿಯ ನಿರ್ದೇಶಕ, ನಟ ಗುರುಪ್ರಸಾದ್ ಆತ್ಮಹತ್ಯೆ!

ನಟ, ನಿರ್ದೇಶಕ ಮಠ ಗುರುಪ್ರಸಾದ್‌ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಗುರುಪ್ರಸಾದ್‌ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಗುರುಪ್ರಸಾದ್‌ ಮಾಡಿದ್ದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ರಂಗನಾಯಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ರು. ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗಿ ಆಗಿದ್ರು. ಬಿಗ್ ಬಾಸ್ ನಲ್ಲೂ ಮಿಂಚಿದ್ದ ಗುರು ಪ್ರಸಾದ್, ವಿವಾದಗಳಿಂದಳು ಹೆಸರುವಾಸಿಯಾಗಿದ್ದರು. ಇದೀಗ ಆತ್ಮಹತ್ಯೆ ಮೂಲಕ ಗುರು ಪ್ರಸಾದ್ ಸಿನಿಪ್ರಿಯರ ಕಣ್ಣಲ್ಲಿ ನೀರು ತರಿಸಿದ್ದಾರೆ.