ವ್ಯಕ್ತಿಯೋರ್ವ ಕಾಯಿ ಕೀಳಲೆಂದು ತೆಂಗಿನ ಮರವೇರಿ ಆಯತಪ್ಪಿ ತೆಂಗಿನ ಮರದಿಂದ ಬಿದ್ದು ಗೇಟಿನ ಸರಳಿಗೆ ಕಾಲು ಸಿಲುಕಿಗೊಂಡ ಘಟನೆ ಉಡುಪಿಯ ಲಕ್ಷ್ಮೀಂದ್ರ ನಗರದಲ್ಲಿ ಸಂಭವಿಸಿದೆ.
ಮಂಜೇಗೌ(36) ತೆಂಗಿನಕಾಯಿ ಕೀಳಲೆಂದು ಮರವೇರಿದ್ದ ವ್ಯಕ್ತಿ. ಇವರು ಆಯತಪ್ಪಿ ಬಿದ್ದ ಪರಿಣಾಮ ಅವರ ಎಡಗಾಲು ಗೇಟಿನ ಸರಳಿನೊಳಗೆ ಸಿಲುಕಿಕೊಂಡಿದೆ.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಕಾಲಿಗೆ ತಿವಿದ ಸರಳನ್ನು ಕತ್ತರಿಸಿ, ಮಂಜೇಗೌಡರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.