Header Ads Widget

ಎಂ ಎ ಸ್ನಾತಕೋತ್ತರ ಪದವಿ : ಉಡುಪಿಯ ವಿಂಧ್ಯಾ ಆಚಾರ್ಯಳಿಗೆ ಪ್ರಥಮ‌ ರ್ಯಾಂಕ್ ಸಹಿತ ಚಿನ್ನದ ಪದಕ

ಬೆಂಗಳೂರಿನ ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವವು ಬುಧವಾರ ನೆರವೇರಿತು.

ಈ ಸಂದರ್ಭದಲ್ಲಿ ವಿವಿಯಲ್ಲಿ ಎಂ ಎ. ಪರ್ಫಾಮಿಂಗ್ ಆರ್ಟ್ (ನೃತ್ಯಶಾಸ್ತ್ರ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಉಡುಪಿಯ ಯುವ ನೃತ್ಯ ಪ್ರತಿಭೆ ಕುಮಾರಿ ವಿಂಧ್ಯಾ ಆಚಾರ್ಯ ಸ್ವರ್ಣ ಪದಕ ಸಹಿತ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. 

ಈಕೆ ಕೆ. ವಿಷ್ಣುಮೂರ್ತಿ ಆಚಾರ್ಯ ಮತ್ತು ಸ್ನೇಹಾ ಆಚಾರ್ಯ ದಂಪತಿಯ ಸುಪುತ್ರಿ. 

ಭರತನಾಟ್ಯ ಹಾಗು ಯಕ್ಷಗಾನ ಕಲಾಪ್ರವೀಣೆಯಾಗಿದ್ದು ಕಳೆದ ಕೆಲ ವರ್ಷಗಳಿಂದ ರಾಜ್ಯ ದೇಶ ಮತ್ತು ವಿದೇಶಗಳ ನೂರಾರು ವೇದಿಕೆಗಳಲ್ಲಿ ತಮ್ಮ ನೃತ್ಯಕಲಾಪ್ರತಿಭೆಯಿಂದ ಚಿರಪರಿಚಿತಳಾಗಿದ್ದಾಳೆ.