Header Ads Widget

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನಲ್ಲಿ ಗೋಪೂಜೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಪ್ರತಿ ಬಾರಿಯಂತೆ ಈ ಬಾರಿಯೂ ದೀಪಾವಳಿ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಿತು. ಋತ್ವಿಜರಾದ ವೇದಮೂರ್ತಿ ಅನಂತ ಪದ್ಮನಾಭ ಸಗ್ರಿತ್ತಾಯರ ನೇತೃತ್ವದಲ್ಲಿ ಪರಿಷತ್ತಿನ ಬ್ರಾಹ್ಮಿ ಸಭಾಭವನದಲ್ಲಿ ಧನಲಕ್ಷ್ಮಿ ಪೂಜೆ, ಗೋ ಪೂಜೆ ಮತ್ತು ವಾಹನ ಪೂಜೆಯು ಶ್ರದ್ಧಾಪೂರ್ವಕವಾಗಿ ನಡೆದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸೇರಿ ಸಂಭ್ರಮಿಸಿದರು. ಗೋವುಗಳು ಕಟುಕರ ಕೈಗೆ ಸಿಕ್ಕಿ ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಜನತೆಗೆ ಗೋಮಾತೆಯ ಶ್ರೇಷ್ಟತೆಯ ಅಲ್ಪ ಜ್ಞಾನ ವಾದರೂ ಇರಬೇಕು. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಬ್ರಾಹ್ಮಣ್ಯ ವೃದ್ಧಿಗೆ ನಮ್ಮ ಈ ಸಂಪ್ರದಾಯಗಳ ಆಚರಣೆ ಅತಿ ಅವಶ್ಯಕ ಎಂದು ಕರೆ ಇತ್ತರು. ಬಂದಂತಹ ಅತಿಥಿ ಅಭ್ಯಾಗತರಿಗೆ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರ ಸ್ವಾಮಿ ಉಡುಪರು ದೀಪಾವಳಿಯ ಶುಭಾಶಯಗಳನ್ನು ಸಲ್ಲಿಸಿದರು. ಸದಸ್ಯರುಗಳ ದ್ವಿಚಕ್ರ, ಚತುರ್ ಚಕ್ರ ವಾಹನಗಳಿಗೆ ವಿಧಿ ಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು. ಅಷ್ಟದ್ರವ್ಯ ಮೇವು ಇತ್ಯಾದಿಗಳನ್ನು ಇಟ್ಟು ಮಹಿಳಾ ಸದಸ್ಯರು ಗೋವುಗಳ ಕಾಲು ತೊಳೆದು ಸಿಂಗರಿಸಿ ಗೋಪಾಲ ಕೃಷ್ಣಾಂತರ್ಗತ ಗೋಮಾತೆಯ ಪೂಜಾ ಕೈಂಕರ್ಯ ಸಂಪನ್ನಗೊಂಡಿತು.