Header Ads Widget

ಸಿಡಿಲು ಬಡಿದು ಬಾಲಕ ಮೃತ್ಯು


 ಭಾನುವಾರ ಸಂಜೆ ಬಂಟ್ವಾಳದಾದ್ಯಂತ ಸಿಡಿಲು,ಮಿಂಚಿನ ಅಬ್ಬರಕ್ಕೆತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಬಾಲಕನೋರ್ವ ಮೃತಪಟ್ಟ ಘಟನೆ  ನಡೆದಿದೆ.

ಕೆದಿಲಗ್ರಾಮದ ಮುರಿಯಾಜೆ  ನಿವಾಸಿ ಚಂದ್ರಹಾಸ ಎಂಬವರ ಪುತ್ರ ಸುಭೋದ್ ಸಿ (14) ಎಂಬ ಬಾಲಕ ಸಿಡಿಲು ಬಡಿದು ಗಾಯಗೊಂಡಿದ್ದು, ಕೂಡಲೇ ಅತನನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅತನನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 

ಮೃತ ಬಾಲಕ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ಮನೆಯಂಗಳದಲ್ಲಿ ನಿಂತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ವಿಟ್ಲ ಕಂದಾಯ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ, ಕೆದಿಲ ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್, ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹರೀಶ್ ವಾಲ್ತಾಜೆ ರವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಹಠಾತನೇ ಅಬ್ಬರದ ಸಿಡಿಲು ಹಾಗೂ ಮಿಂಚಿನಿಂದ ಒಂದು ಕ್ಷಣ ಜನಸಾಮಾನ್ಯರಲ್ಲಿ ಭಯದ ವಾತಾವರಣವನ್ನುಂಟು ಮಾಡಿತುಜೊತೆಗೆ ಧಾರಕಾರ‌ಮಳೆಯು ಸುರಿಯುವ‌ ಮೂಲಕ ಬಿಸಿಲಿನ ಝಳದಿಂದ ತತ್ತರಿಸಿದ‌ ಜನರಿಗೆ‌ ತಂಪನ್ನು‌ ನೀಡಿತು.

ಸಂಜೆಯವರೆಗೂ ಸುಡುಬಿಸಿನಂತಿದ್ದ ವಾತಾವರಣ ಇದ್ದಂತೆ ಸ್ಪಾಕ್೯ ನಂತ ಮಿಂಚು,ಜೊತೆಗೆ ಅಬ್ಬರದ ಸಿಡಿಲು ಹಾಗೂ ಸುಮಾರು ಒಂದು ತಾಸುಗಳ ಕಾಲ ಬಿರುಸಿನ ಮಳೆಯು ಸುರಿಯಿತು